ಕಾಂಗ್ರೆಸ್ ಗೂ ನನಗೂ ಮುಗಿದ ಅಧ್ಯಾಯ: ಶೀಘ್ರದಲ್ಲೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ- ಸಿಎಂ ಇಬ್ರಾಹಿಂ ಘೋಷಣೆ.

Promotion

ಬೆಂಗಳೂರು,ಜನವರಿ,27,2022(www.justkannada.in):  ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್​ರವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್​ ಎಂಎಲ್​ಸಿ ಸಿಎಂ ಇಬ್ರಾಹಿಂ ಇದೀಗ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.

ಹೌದು, ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಗೂ ನನಗೂ ಮುಗಿದ ಅಧ್ಯಾಯ.  ಸಿದ್ದರಾಮಯ್ಯಗಾಗಿ ದೇವೇಗೌಡರನ್ನು ಬಿಟ್ಟಿದ್ದೆವು. ಜೈಲಿನಲ್ಲಿದ್ದು ಕಟ್ಟಿದ್ದ ಪಕ್ಷ ಜೆಡಿಎಸ್ ಬಿಟ್ಟಿದ್ದೆವು. ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ಧರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ. ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿದ್ರು. ಹೀಗಾಗಿ ಬಾದಾಮಿಯಲ್ಲಿ ಅಲ್ಲಿನ ಎಲ್ಲಾ ನಾಯಕರನ್ನ ಒಪ್ಪಿಸಿ ಬಾದಾಮಿಯಲ್ಲಿ  ನಾಮಪತ್ರ ಹಾಕಿಸಿದ್ದೆ.  ಅವರಿಗೆ ನಾನು ಹೊಸ ರಾಜಕೀಯ ಜೀವನ ಕೊಟ್ಟೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ಕೊಡ್ತೇನೆ  ದೇವೆಗೌಡರನ್ನ ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ ಡಿಕೆಶಿಗೂ ನಮಗೂ ಹೊಂದಾಣಿಕೆಯಾಗಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

Key words: Congress -CM Ibrahim -resignation

ENGLISH SUMMARY…

My relationship with Congress is a closed chapter: I will resign from the council representation soon – CM Ibrahim
Bengaluru, January 27, 2022 (www.justkannada.in): Following the appointment of Congress leader B.K. Hariprasad as the leader of opposition in the legislative council, Congress MLC C.M. Ibrahim announced to quit Congress, expressing his displeasure.
Speaking to the media persons today, he informed that his relationship with Congress is a closed chapter now. “We had visited Devegowda because of Siddaramaiah. We had quit the JDS which we built being in jail. I can’t tell you all the things at a time. I will inform you in detail one by one. I will inform you my decision soon,” he added.
“We built a new political life for Siddaramaiah. But he has given a nice gift for us now. I will receive it happily. We knew Siddaramaiah would lose in the Chamundi Assembly constituency, that is why we convinced our leaders and helped him to contest from Badami. It is me who gave him a new political life,” he said.
“I will soon resign from my post. I will arrive at a decision after meeting Devegowda. I can’t adjust with D.K. Shivakumar,” he added.
Keywords: C.M. Ibrahim/ MLC/ resign