ರಾಜ್ಯದಲ್ಲಿ ಇರೋದು ಕಾಂಗ್ರೆಸ್-  ಬಿಜೆಪಿ ಮೈತ್ರಿ ಸರ್ಕಾರ- ಡಿ.ಕೆ ಶಿವಕುಮಾರ್ ವ್ಯಂಗ್ಯ…

Promotion

ಮೈಸೂರು,ಜನವರಿ,25,2021(www.justkannada.in):  ಇದು ಕಾಂಗ್ರೆಸ್-  ಬಿಜೆಪಿ ಮೈತ್ರಿ ಸರ್ಕಾರ. ನಮ್ಮ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌. ಕಾಂಗ್ರೆಸ್- ಬಿಜೆಪಿ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.jk

ಮೈಸೂರಿನಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌. ಕಾಂಗ್ರೆಸ್- ಬಿಜೆಪಿ ಸರ್ಕಾರ.  ನಮ್ಮವರನ್ನು ಕರೆದುಕೊಂಡು ಹೋಗಿ ಗಿಫ್ಟ್ ಕೊಟ್ಟಿದ್ದಾರೆ.  ರಾಜ್ಯ ಸರ್ಕಾರ ಸುಭದ್ರವಾಗಿದೆ. ಎಲ್ಲರೂ ಅತ್ಯಂತ ಒಗ್ಗಟ್ಟಿನಿಂದ ಸಹಕಾರ ಕೊಡುತ್ತಿದ್ದಾರೆ ಎಂದು ಲೇವಡಿ‌ ಮಾಡಿದರು.

ಈ ಸರ್ಕಾರ ಬಲಿಷ್ಠವಾಗಿದೆ. ಸರ್ಕಾರಕ್ಕೆ‌ ಬಹಳಷ್ಟು ಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ. ಸರ್ಕಾರದಲ್ಲಿ ಏನೇನು ಗೊಂದಲವಿಲ್ಲ. ಇನ್ನು ಮುಖ್ಯಮಂತ್ರಿಗಳೂ ಬಹಳ ದೊಡ್ಡವರು ಎಂದು ಸರ್ಕಾರದ ಸಂಪುಟ ಪುನರಚನೆ ಹಾಗೂ ಖಾತೆ ಹಂಚಿಕೆ‌ ಗೊಂದಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾನು ಕಾಂಗ್ರೆಸ್ ನ ರೈತ ವಿಭಾಗಕ್ಕೆ ಸೂಚನೆ ಕೊಟ್ಟಿದ್ದೇನೆ. ರೈತರಿಗೆ ಬೇಕಾದ ಎಲ್ಲಾ ನೆರವನ್ನೂ ಕೊಡುತ್ತೇವೆ. ಟ್ರ್ಯಾಕ್ಟರ್ ಪರೇಡ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗಬಹುದು. ಅದು ಒಂದೆರಡು ಗಂಟೆಗಳು ಮಾತ್ರ. ರೈತ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವವನು, ಅದಕ್ಕಾಗಿ ಎಲ್ಲವನ್ನು ಸಹಿಸಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.“ಕಂಡಕಂಡಲ್ಲಿ ತ್ಯಾಜ್ಯ ಸುರಿಯುವ ಲಾರಿ ಜಪ್ತಿ ಮಾಡಿ, ಮಾಲೀಕರ ಬಂಧಿಸಿ” : ಸಚಿವ ಎಸ್.ಟಿ.ಸೋಮಶೇಖರ್ see more... https://www.justkannada.in/?p=54129

ಸರ್ಕಾರ ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು, ಹತ್ತಿಕ್ಕುವುದಲ್ಲ. ಬಿಜೆಪಿಯವರಿಗೆ ತೊಂದರೆಯಾದಾಗ ಪ್ರತಿಭಟಿಸಿಲ್ಲವಾ..? ಒಂದು ವೇಳೆ ಟ್ರಾಕ್ಟರ್ ಜಪ್ತಿಮಾಡಿ ಕೇಸ್ ಹಾಕಿದ್ರೆ ಜೈಲಿಗೆ ಹೋಗಲು ಸಿದ್ದ. ಅಲ್ಲಿಂದಲೇ ಜೈಲ್ ಬರೋ ಶುರುಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

Key words: Congress-BJP- alliance- government – state-irony –kpcc president-DK Sivakumar.