ಆಕ್ಸಿಜನ್ ಕೊರತೆಯಿಂದ ತಂದೆ ಕಳೆದುಕೊಂಡ ಬಾಲಕಿ ಸಂಕಷ್ಟಕ್ಕೆ ಕಣ್ಣೀರಿಟ್ಟ ಡಿಕೆಶಿ: ಸಚಿವ ಬೈರತಿ ವ್ಯಂಗ್ಯ.

 

ಹಾವೇರಿ, ಅ.02, 2022 : (www.justkannada.in news ) ಬಿಜೆಪಿ ಸರ್ಕಾರ 40% ಸರ್ಕಾರ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಚಿವ ಬೈರತಿ ಬಸವರಾಜು ತಿರುಗೇಟು.

ರಾಹುಲ್ ಗಾಂಧಿ ಹಾಗೂ ಅವರ ತಾಯಿ ಬೇಲ್ ಮೇಲೆ ಹೊರಗೆ ಇದ್ದಾರೆ. ಕಮಿಷನ್ ತಗೋಳೋದ್ರಲ್ಲಿ ಪಿತಾಮಹ ಅಂದರೆ ಕಾಂಗ್ರೆಸ್ ಪಕ್ಷದವರು.ಅವರಿಗೆ ನಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅಕಸ್ಮಾತ್ ಇದ್ರೂ ಕೂಡಾ ದಾಖಲೆ ಒದಗಿಸಿ ಮಾತನಾಡಬೇಕು ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರು, ಮಾದ್ಯಮಗಳಿಗೆ ಹೇಳಿಕೆ ನೀಡಿದರು.

ಕಾಂಗ್ರೆಸ್ ನವರು ಭಾರತ್ ಜೋಡೋ ಯಾತ್ರೆ, ಪಾದಯಾತ್ರೆ ಮಾಡಲಿ ಜನ ಅದನ್ನು ಲೆಕ್ಕಕ್ಕೆ ತಗೊಳೋ ಪರಿಸ್ಥಿತಿ ಇಲ್ಲ. ಈ ರೀತಿ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನಾನು ಕೊಡ್ತಿದ್ದೇನೆ. ಇವರ ಭಾರತ್ ಜೋಡೋ ಯಾತ್ರೆ ನಾನು ಖಂಡಿಸುತ್ತೇನೆ.

ನಾವು ಹಲವು ಜನಪರ ಅಭಿವೃದ್ಧಿ ಕೆಲಸ ಮಾಡಿದ್ದೀವಿ. ಅದನ್ನು ಇಟ್ಟುಕೊಂಡು ಜನರ ಮುಂದೆ ಹೋಗ್ತೀವಿ. ಇವರು ಯಾವ ನೈತಿಕತೆ ಇಟ್ಟುಕೊಂಡು ಜನರ ಹತ್ರ ಮತ ಕೇಳೋಕೆ ಹೋಗ್ತಾರೆ? ಹಾಗೇನಾದರೂ ಮಾಡಿದ್ರೆ ಕಳೆದ ಬಾರಿ ಯಾಕೆ ಇವರಿಗೆ 79 ಸೀಟು ಬಂತು?
ಸಿದ್ದರಾಯಮಯ್ಯರಿಂದ ಆರ್.ಎಸ್.ಎಸ್ ಟಾರ್ಗೆಟ್ ವಿಚಾರ,

ಆರ್.ಎಸ್.ಎಸ್ ರಾಷ್ಟ್ರೀಯ ಸ್ವಯಂ ಸೇವಕರ ಸಂಘ. ಇದು ರಾಷ್ಟ್ರದ ಸಂಸ್ಕೃತಿ ಬಗ್ಗೆ ಅಪಾರವಾದ ಗೌರವ ಹೊಂದಿದೆ
ಅಸೂಯೆಯಿಂದ ಸಿದ್ದರಾಮಯ್ಯ ಆರ್.ಎಸ್.ಎಸ್ ಬಗ್ಗೆ ಮಾತಾಡ್ತಿದ್ದಾರೆ. ರಾಜ್ಯ ಹಾಗೂ ದೇಶದ ರಕ್ಷಣೆ ಕುರಿತು ನಮಗೆ ಆರ್.ಎಸ್.ಎಸ್ ನವರು ಸಲಹೆ ನೀಡ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ನವರಿಗೆ ಆರ್.ಎಸ್.ಎಸ್ ಮೇಲೆ ಅಸೂಯೆ ಉಂಟು ಮಾಡಿದೆ ಎಂದರು.

ಕಾಂಗ್ರೆಸ್, ‘ ಪೇ ಸಿಎಂ’ ಮಾಡ್ತಿರೋದು ನಾಚಿಕೆಗೇಡಿನ ಸಂಗತಿ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಏನೇನ್ ಮಾಡಿದ್ದರು ಅಂತ ನೋಡಿಕೊಳ್ಳಲಿ. ಸಿದ್ದರಾಮಯ್ಯ ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ, ಹಿಂದೆ ಯಾವ ರೀತಿ ಅಂತ. ಅದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದರು.

ಭಾರತ್ ಜೋಡೋ ಸಂದರ್ಭದಲ್ಲಿ, ಚಾ.ನಗರದಲ್ಲಿ ಕೋವಿಡ್ ವೇಳೆ ಆಕ್ಸಿಜನ್ ಕೊರತೆಯಿಂದ ತಂದೆ ಕಳೆದುಕೊಂಡ ಬಾಲಕಿ ಸಂಕಷ್ಟಕ್ಕೆ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ ವಿಚಾರ ಪ್ರಸ್ತಾಪಿಸಿ ಸಚಿವ ಬೈರತಿ ಬಸವರಾಜ ವ್ಯಂಗ್ಯವಾಡಿದರು. ಅವರು ಏನೇ ನಾಟಕ ಮಾಡಲಿ. ಜನ ನಮ್ಮ ಪರ ಇದ್ದಾರೆ. ಮುಂದಿನ ದಿನಗಳಲ್ಲಿ ಜನ ನಮಗೆ ಆಶೀರ್ವಾದ ಮಾಡ್ತಾರೆ‌ ಅಂತ ವಿಶ್ವಾಸ ಇದೆ ಎಂದರು.

key words : congress-bharath-jodo-bjp-basavaraj