ಕಾಂಗ್ರೆಸ್ ನವರದ್ದು ಆಧಾರ ಇಲ್ಲದ ಆರೋಪ: ಶಾಸಕ ಸಿ.ಟಿ ರವಿ ಟೀಕೆ.

Promotion

ಚಿಕ್ಕಮಗಳೂರು,ಫೆಬ್ರವರಿ,15,2023(www.justkannada.in): ರಾಜ್ಯ ಬಿಜೆಪಿ ಸರ್ಕಾರ  ತರಾತುರಿಯಲ್ಲಿ ಶಾಸಕರು ಸಚಿವರಿಗೆ ಟೆಂಡರ್ ಹಂಚಿ ಗೋಲ್ಮಾಲ್ ನಡೆಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಸಿ.ಟಿ ರವಿ,  ಆಧಾರ ಇಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಆಧಾರ ಇಟ್ಟುಕೊಂಡು ಆರೋಪ ಮಾಡಬೇಕು. ಈ ಬಗ್ಗೆ ವಿಧಾನಸೌಧದಲ್ಲಿ ಯಾಕೆ ಮಾತನಾಡಲಿಲ್ಲ. ಈಗ ಹೊರಗೆ ಹೋಗಿ ಆರೋಪ ಮಾಡುತ್ತಿದ್ದಾರೆ ಅಷ್ಟೆ. ವಿಧಾನಸೌಧಕ್ಕಿಂತ ಜಾಗ ಬೇಕಾ ಇವರಿಗೆ..? ಕಾಂಗ್ರೆಸ್ ನವರು ಮೊದಲು ದಾಖಲೆ ಇಟ್ಟುಕೊಂಡು ದೂರು ನೀಡಲಿ ಎಂದು ಕುಟುಕಿದರು.

Key words: Congress-baseless-allegation-MLA -CT Ravi