ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಖಂಡನೆ: ಕೋರ್ಟ್ ಕಾರ್ಯಕಲಾಪ ಬಹಿಷ್ಕರಿಸಿ ಮೈಸೂರಿನಲ್ಲಿ ವಕೀಲರಿಂದ ಪ್ರತಿಭಟನೆ

Promotion

ಮೈಸೂರು,ಜೂನ್,7,2022(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ತಾಲ್ಲೂಕಿನಲ್ಲಿ ವಕೀಲರಾಗಿದ್ದವರು. ವಕೀಲರಿಗೇನು ಗೊತ್ತು ಆರ್ಥಿಕತೆ ಎಂಬ ಸಂಸದ ಪ್ರತಾಪ್ ಸಿಂಹರ ಹೇಳಿಕೆಯನ್ನ ಖಂಡಿಸಿ ಇಂದು  ಮೈಸೂರಿನ ವಕೀಲರು ಕೋರ್ಟ್ ಕಾರ್ಯಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೈಸೂರು ವಕೀಲ ಸಂಘದಿಂದ  ಕೋರ್ಟ್ ಮುಂಭಾಗ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು. ಸಂಸದ ಪ್ರತಾಪ್ ಸಿಂಹ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾನಿರತ ವಕೀಲರು, ಪ್ರತಾಪ್ ಸಿಂಹ ರಾಜೀನಾಮೆ ನೀಡಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.

ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರತಾಪ್ ಸಿಂಹಗೆ ಆಹ್ವಾನ ನೀಡದಂತೆ ಸಂಘದಿಂದ ನಿರ್ಣಯ ಕೈಗೊಳ್ಳಲಾಯಿತು. ದಕ್ಷಿಣ ಪದವೀಧರ ಚುನಾವಣೆ ಪ್ರಚಾರಕ್ಕೆ ಬಿಜೆಪಿಗರಿಗೆ ಸಂಘದ ಕಚೇರಿಗೆ ಅವಕಾಶ ಇಲ್ಲ ಎಂದು ವಕೀಲರು ತಿಳಿಸಿದರು.

Key words: Condemning-MP-Prathap simha- statement-Protests -lawyers