ಜೆಡಿಎಸ್- ಕಾಂಗ್ರೆಸ್ ನಿಂದ ಹೊಂದಾಣಿಕೆ ರಾಜಕಾರಣ:  ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲ್ಲ- ಕೇಂದ್ರಸಚಿವ ಪ್ರಹ್ಲಾದ್ ಜೋಶಿ.

Promotion

ನವದೆಹಲಿ, ಮಾರ್ಚ್,29,2023(www.justkannada.in): ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಲು ಮುಂದಾಗಿವೆ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅತಂತ್ರ ಸರ್ಕಾರ ಬರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶದಲ್ಲಿ ಕಾಂಗ್ರೆಸ್ ತಿರಸ್ಕರಗೊಂಡಿರುವ ಪಕ್ಷ ಗುಜರಾತ್, ಈಶಾನ್ಯ ಭಾರತದಲ್ಲಿ ಜನ ತಿರಸ್ಕರಿಸಿದದಾರೆ. ಘೋಷಣೇ ಉಚಿತ, ಭ್ರಷ್ಟಾಚಾರ ಖಚಿತ ಎಂಬ ಪರಿಸ್ಥಿತಿ ಕಾಂಗ್ರೆಸ್ ಗಿದೆ ಎಂದು ಟೀಕಿಸಿದರು.

ಶೀಘ್ರದಲ್ಲೇ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ.  ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಉತ್ತಮ ಆಡಳಿತ  ನೀಡಿದೆ. ಪ್ರಧಾನಿ ಮೋದಿ ಬೊಮ್ಮಾಯಿ ನೇತೃತ್ವದಲ್ಲಿ  ಬಿಜೆಪಿ ಗೆಲ್ಲಲಿದೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

Key words: Conciliation -politics – JDS-Congress-Union Minister -Prahlad Joshi.