“ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ” : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಫೆಬ್ರವರಿ,14,2021(www.justkannada.in)  : ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ. ಆದರೂ, ರೈತರಿಗೆ ಕೊಟ್ಟ ಸಾಲಮನ್ನ ಭರವಸೆಯನ್ನು ಈಡೇರಿಸಿದೆವು. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ತಂದಿದ್ದೇವೆ. ನಮ್ಮ ಸರ್ಕಾರ ಸಾಲಮನ್ನಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.jkಸಮ್ಮಿಶ್ರ ಸರ್ಕಾರದ ಬಗ್ಗೆ ಹಲವು ಟೀಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ತಂದಿದ್ದೇವೆ. ನಮ್ಮ ಸರ್ಕಾರ ಸಾಲಮನ್ನಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ರೈತರಿಗೆ ಬೆಳೆ ಸಾಗಾಣಿಕೆ ವೆಚ್ಚ ನೀಡಲಾಗಿದೆ. ಉಗ್ರಾಣದಲ್ಲಿ ರೈತರು‌ ಬೆಳೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗಿತ್ತು ಎಂದರು.

ಕೊರೋನಾದಿಂದ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷವಿದೆ

ಶೇ.3 ರ ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಸಾಲ ಯೋಜನೆ ಹಾಗೂ  ಬಡವರ ಬಂಧು ಯೋಜನೆ ತರಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದೆವು. ಇವತ್ತು ಕೊರೋನಾದಿಂದ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷವಿದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ 1000 ಪಬ್ಲಿಕ್ ಶಾಲೆ ಮಾಡಲಾಗಿತ್ತು. ಖಾಸಗಿ ಶಾಲೆಗಳಲ್ಲಿ ಬಡವರು ಮಕ್ಕಳನ್ನು ಓದಿಸಲು ಕಷ್ಟ. ಹಾಗಾಗಿ, ಸರ್ಕಾರದಿಂದಲೇ ಪಬ್ಲಿಕ್ ಶಾಲೆ ಯೋಜನೆ ತರಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದುವರೆಸಿಲ್ಲ. ಈ ಯೋಜನೆ ನಿಂತಿದೆ ಎಂದು ಕಿಡಿಕಾರಿದರು.

ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆ ಸಲ್ಲಿಸುತ್ತೆನೆ.  ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ. ಈ ಹಿಂದೆ ಮತ್ತೊಂದು ಪಕ್ಷದ ಜೊತೆ ಸರ್ಕಾರ ಮಾಡುವ ಅನಿವಾರ್ಯ ಪರಿಸ್ಥಿತಿಗೆ ಬಂತು. ಮತ್ತೊಂದು ಪಕ್ಷದ ಜೊತೆ ಸರ್ಕಾರ ಮಾಡಿದಕ್ಕೆ ನಮ್ಮ ಕಾರ್ಯಕರ್ತರ ಕೆಲಸ ಮಾಡಲು ಆಗಲಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

14 ತಿಂಗಳ ನನ್ನ ಆಡಳಿತ ಬಗ್ಗೆ ಹಲವಾರು ಟೀಕೆಗಳನ್ನು ಮಾಡಿದ್ದಾರೆ. ಮೊನ್ನೆ ಸಹಕಾರ ಮಂತ್ರಿಗಳು ಭಾಷಣ ಮಾಡಿ ರೈತರು ಯಾರು ಅರ್ಜಿ ಹಾಕಿಲ್ಲ ಎಂದು ಹೇಳಿದ್ದಾರೆ. ಈ ಮಾತನ್ನು ನಂಬಲು ಸಾಧ್ಯವೆ ,ಇದು ಸರ್ಕಾರಿ ಕಾರ್ಯಕ್ರಮ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : composite-government-For us-Cooperation-Was not-Former CM-H.D.Kumaraswamy