ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯಪಾಲರಿಗೆ ದೂರು.

Promotion

ಬೆಂಗಳೂರು,ಆಗಸ್ಟ್,16,2022(www.justkannada.in):  ಆರ್ ಎಸ್ ಎಸ್ ಸಿದ್ಧಾಂತ, ತತ್ವಗಳಿಗೆ ತಲೆಬಾಗುತ್ತೇನೆ ಎಂದು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿಲಾಗಿದೆ.

ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಎಂಬುವವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.  ಅಸಂವಿಧಾನಿಕ ಸಂಘಟನೆಗೆ ಬದ‍್ಧವಾಗಿರುವ ಸಿಎಂ ವಿರುದ್ಧ ಕ್ರಮ  ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಆರ್ ಎಸ್ ಎಸ್ ಸಿದ್ಧಾಂತಕ್ಕೆ ತಲೆಬಾಗುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಮೂಲಕ  ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದಾರೆ . ಆರ್ ಎಸ್ ಎಸ್ ಸಂಘಟನೆ  ಕಾನೂನಿನಡಿ ನೋಂದಣಿಯಾಗಿಲ್ಲ . ಹಲವಾರು ಕೋಟಿ ವ್ಯವಹಾರವಿದ್ದರೂ  ಲೆಕ್ಕಪತ್ರ ನಿರ್ವಹಿಸಿಲ್ಲ. ಆರ್ ಎಸ್ ಎಸ್ ಸರಿಯಾಗಿ ಸದಸ್ಯರ ನಿರ್ವಹಣೆ ಮಾಡಿಲ್ಲ.  ಆರ್ ಎಸ್ ವಿರುದ್ಧ ಖುದ್ಧು ಸಿಎಂಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಹನುಮೇಗೌಡ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Key words: Complaint – Governor- against -CM Basavaraja Bommai.