ಬಿಜೆಪಿ ಸರ್ಕಾರದಿಂದಲೇ ಕಮಿಷನ್ ಶುರು: ಕಿರುಕುಳ ನೀಡಿ ಹಣ ವಸೂಲಿ ಸತ್ಯ- ಹೆಚ್.ಡಿಕೆ ಆರೋಪ.

Promotion

ಮೈಸೂರು,ಆಗಸ್ಟ್,26,2022(www.justkannada.in): ಬಿಜೆಪಿ ಸರ್ಕಾರದಿಂದಲೇ ಕಮಿಷನ್ ಶುರುವಾಗಿದ್ದು, ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿರುವುದು ಸತ್ಯ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 2008ರಲ್ಲಿ ಬಿಜೆಪಿ ಸರ್ಕಾರದಿಂದಲೇ ಕಮಿಷನ್ ಶುರುವಾಯಿತು. ಅಪರೇಷನ್ ಕಮಲದಿಂದ ಈ ವಾತಾವರಣ ಸೃಷ್ಠಿಯಾಗಿದೆ. ಎಲ್ಲಾ ಪಕ್ಷಗಳ ಶಾಸಕರು ಗಣಿಗಾರಿಕೆಗೆ ಲೈಸೆನ್ಸ್ ಪಡೆದಿದ್ದಾರೆ.  ಮರಳು ದಂಧೆ ಆರಂಭವಾಗಿದ್ದ ಬಿಜೆಪಿ ಸರ್ಕಾರದಿಂದ ಎಂದು ದೂರಿದರು.

ಗುತ್ತಿಗೆ ದಾರರಿಂದ ಕಮಿಷನ್ ಪಡೆಯುವುದು ಶೇ 3 ಮತ್ತು 4ರಷ್ಟಿದೆ. ಹಿಂಸೆ ಮಾಡಿ ಬಸಲವಂತವಾಗಿ ಕಮಿಷನ್ ಪಡೆಯಲಾಗುತ್ತಿದೆ.   ಉಪನೋಂದಣಿ ಕಚೇರಿಯಲ್ಲಿ ಚಂದಾ ಎತ್ತುವುದೂ ಇದೆ. ಇದು ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ನನ್ನ ಅವಧಿಯಲ್ಲೂ ಕೆಲವರು ಹಣ ಪಡೆದಿದ್ದಾರೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..? ಇದನ್ನೆಲ್ಲಾ ಸರಿ ಮಾಡೋದು ಯಾರು.  ಎಲ್ಲದಕ್ಕೂ ಸಾಕ್ಷಿ ಕೇಳುತ್ತೀರಿ.  ಮೊದಲು ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಸರ್ಕಾರದ ಬಗ್ಗೆ ಕೆಟ್ಟ ಜನಾಭಿಪ್ರಾಯ ಇದೆ. ಪರ್ಸೆಂಟೇಜ್  ಸಂಸ್ಕೃತಿ  ಜನರಿಗೆ ಗೊತ್ತಿದೆ. ಸರ್ಕಾರದ ಆಡಳಿತ ಯಂತ್ರ ದುರ್ಬಳಕೆಯಾಗುತ್ತಿದೆ ಎಂದರು.

Key words: Commission- started – BJP government -H.D Kumaraswamy