ಮತ್ತೊಮ್ಮೆ ವಿಚಾರಣೆಗೆ ಬನ್ನಿ: ನಟ ದಿಗಂತ್ ಗೆ ಸಿಸಿಬಿ ನೋಟಿಸ್

Promotion

ಬೆಂಗಳೂರು, ಸೆಪ್ಟೆಂಬರ್ 23, 2020 (www.justkannada.in): ಮತ್ತೊಮ್ಮೆ ವಿಚಾರಣೆ ಹಾಜರಾಗುವಂತೆ ಸಿಸಿಬಿಯಿಂದ ನಟ ದಿಗಂತ್ ಗೆ ನೋಟಿಸ್ ಬಂದಿದೆ.

ಈ ಹಿಂದೆಯೂ ದಿಗಂತ್ ಹಾಗೂ ನಟಿ ಐಂದ್ರಿತಾ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಲಾಗಿತ್ತು.
ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಹೇಳಿದ್ದರು. ದಂಪತಿ ಕೂಡ ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.

ಇಂದು ಮತ್ತೆ ವಿಚಾರಣೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ನಟ ದಿಗಂತ್ ಮಾಧ್ಯಮಗಳಿಗೆ ಲಭ್ಯರಾಗಿಲ್ಲ.