ಕೇವಲ 17 ಮಂದಿಗೆ ಈ ಮಾತು ಹೇಳಿಲ್ಲ. ಕಾಂಗ್ರೆಸ್ ಗೆ ಬರಲು ಇಚ್ಙಿಸುವವರು ಯಾರು ಬೇಕಾದ್ರೂ ಅರ್ಜಿ ಹಾಕಬಹುದು- ಡಿ.ಕೆ ಶಿವಕುಮಾರ್

ಬೆಂಗಳೂರು,ಜುಲೈ,3,2021(www.justkannada.in): ನಮ್ಮ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ ಇದ್ದವರು ಕಾಂಗ್ರೆಸ್ ಪಕ್ಷ ಸೇರಲು ಅರ್ಜಿ ಹಾಕಬಹುದು. ಕೇವಲ ಆ 17 ಮಂದಿಗೆ ಈ ಮಾತು ಹೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಹೇಳಿದರು.jk

ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಯಾರು ಕಾಂಗ್ರೆಸ್ ಬರಬೇಕು ಅಂತ ಬಯಸಿದ್ದಾರೋ ಅವರೆಲ್ಲರಿಗೂ ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಮೊದಲು ಅರ್ಜಿ ಹಾಕಲಿ, ಆಮೇಲೆ ನಾವು ನಾಯಕರು ಕುಳಿತು ತೀರ್ಮಾನ ಮಾಡಿ ನಿಲುವು ತೆಗೆದುಕೊಳ್ಳುತ್ತೇವೆ ಎಂದರು.

ಈ ಹಿಂದೆ ಕಾಂಗ್ರೆಸ್ ಬಿಟ್ಟು ಹೋದ 17 ಮಂದಿ  ಅರ್ಜಿ ಹಾಕಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ಯಾರು ಬೇಕಾದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ಆದರೆ ಅಂತಿಮವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜಕೀಯದಲ್ಲಿ ಪಕ್ಷದಿಂದ ಬಿಟ್ಟು ಹೋಗುವುದು, ಮತ್ತೆ ಬರುವುದು ಸಾಮಾನ್ಯ ಎಂದರು.

ಸಚಿವ ಎಂಟಿಬಿ ನಾಗರಾಜ್ ಗೆ ಟಾಂಗ್.

ಇದೇ ವೇಳೆ ಸಚಿವ ಎಂಟಿಬಿ ನಾಗರಾಜ್ ಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಎಂಟಿಬಿ ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ, ಆದರೆ ನನ್ನಿಂದ ಗೆದ್ಧರು ಎಂದು ಹೇಳಲ್ಲ. ನನ್ನ ಎದೆ ಮೇಲೆ ಕಾಂಗ್ರೆಸ್ ಇದೆ ಎಂದಿದ್ದರು. ಕೊನೆಗೆ ಕಾಂಗ್ರೆಸ್ ಬಿಟ್ಟು ಹೋದರು. ಏನು ಮಾಡಲು ಆಗಲ್ಲ ಎಂದರು.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಡೆಯಾಜ್ಞೆ ತಂದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಡಿವಿಎಸ್ ಏಕೆ ತಡೆಯಾಜ್ಞೆ ತಂದಿದ್ದಾರೆ ಗೊತ್ತಿಲ್ಲ. . ಯಾವ ಸಿಡಿ ಅನ್ನೋದನ್ನ ನೀವೆ ತನಿಖೆ ಮಾಡಿ. ಆದರೆ ಅವರು ಕೇಂದ್ರ ಸಚಿವರು, ಅವರ ಬಗ್ಗೆ ನನಗೆ ಗೌರವವಿದೆ ಎಂದರು.

Key words: come – Congress – apply-KPCC president-DK Shivakumar