ಶೀತಗಾಳಿ: ಮದ್ಯಪಾನ ಮಾಡಿದ್ರೆ ಅಪಾಯ !

Promotion

ಬೆಂಗಳೂರು, ಡಿಸೆಂಬರ್ 27, 2020 (www.justkannada.in): ಡಿಸೆಂಬರ್ 29ರಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನದಲ್ಲಿ ತೀವ್ರ ಶೀತಗಾಳಿ ಬೀಸಲಿದ್ದು, ಇಂಥಹ ಸಂದರ್ಭದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಶೀತಗಾಳಿ ಹೆಚ್ಚುತ್ತಿದ್ದು, ಉತ್ತರ ಭಾರತದ ಜನತೆ ಚಳಿಯಿಂದ ತತ್ತರಿಸಿ ಹೋಗಿದ್ದಾರೆ.

ಶೀತಗಾಳಿ ಅಥವಾ ಕೋಲ್ಡ್ ವೇವ್ ನಿಂದಾಗಿ ಮೂಗಿನಲ್ಲಿ ರಕಸ್ರಾವದಂತಹ ಆರೋಗ್ಯ ಸಮಸ್ಯೆಯುಂಟಾಗಲಿದೆ. ಈ ವೇಳೆ ಮದ್ಯಪಾನ ಮಾಡಿದರೆ ದೇಹದ ಉಷ್ಣಾಂಶ ಕುಸಿಯುತ್ತದೆ ಹೀಗಾಗಿ ಮದ್ಯಪಾನ ಮಾಡಬೇಡಿ ಎಂದು ಇಲಾಖೆ ತಿಳಿಸಿದೆ.