ಸಿಎಂ ಯಡಿಯೂರಪ್ಪ ಒಬ್ಬ ವೀಕ್ ಚೀಫ್ ಮಿನಿಸ್ಟರ್- ರಾಜೀನಾಮೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

ಚಾಮರಾಜನಗರ,ಸೆ,16,2019(www.justkannada.in): ರಾಜ್ಯದಲ್ಲಿ ನೆರೆ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ನಷ್ಟ ಆಗಿದೆ. ಆದರೆ ಕೇಂದ್ರಕ್ಕೆ ಕರ್ನಾಟಕದ ಪರ ಕಾಳಜಿ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬ ವೀಕ್ ಚೀಫ್ ಮಿನಿಸ್ಟರ್. ಕೆಲಸ ಮಾಡಲು ಆಗದಿದ್ದರೇ ರಾಜೀನಾಮೆ ಕೊಡಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ,  ಕೇಂದ್ರಕ್ಕೆ ಕರ್ನಾಟಕದ ಪರ, ಬಡವರ, ರೈತರ ಪರ ಕಾಳಜಿ ಇಲ್ಲ. ಕೇಂದ್ರದಲ್ಲಿ ಹಣಕಾಸಿನ ಸಮಸ್ಯೆ ಇದೆ.  ನೆರೆಯಿಂದ 1.25 ಲಕ್ಷ ಕುಟುಂಬ ಬೀದಿಪಾಲಾಗಿದ್ದಾರೆ. 88 ಜನ ಸತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈವರೆಗೆ ಒಂದು ರುಪಾಯಿ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕ 25 ಜನ ಬಿಜೆಪಿ ಎಂ ಪಿಗಳನ್ನ  ಕಳಿಸಿಕೊಟ್ಟಿದೆ. ಒಬ್ಬ ಎಂಪಿಯೂಸಹ ಬಾಯಿ ಬಿಡ್ತಾ ಇಲ್ಲ. ಅವರು ಹೋಗಿ ಮೋದಿಯವರನ್ನು ಭೇಟಿ ಮಾಡಿಲ್ಲ. ಸಿಎಂ ಯಡಿಯೂರಪ್ಪ ಒಬ್ಬ ವೀಕ್ ಚೀಫ್ ಮಿನಿಸ್ಟರ್. ನಾನು ಬರವಿದ್ದಾಗ ಎರಡು ಬಾ ರಿ ಕೇಂದ್ರಕ್ಕೆ ನಿಯೋಗ ಕರೆದು ಕೊಂಡು ಹೋಗಿ ಮಾತನಾಡಿದ್ದೆ. ಆದರೆ ಇವರು ಸರ್ವಪಕ್ಷ ನಿಯೋಗ ಕರೆದೊಯ್ಯುತ್ತಿಲ್ಲ. ಹೀಗಾಗಿ  ಬಿ.ಎಸ್ ಯಡಿಯೂರಪ್ಪ ಅತ್ಯಂತ ವೀಕೆಸ್ಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ವಿ ಹ್ಯಾಡ್ ಎಂದು  ಮಾಜಿ ಸಿಎಂ ಸಿದ್ಧರಾಮಯ್ಯ ಜರಿದರು.

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ: ಅದಕ್ಕೂ ನಮಗೂ ಸಂಬಂಧವಿಲ್ಲ….

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ಹಿನ್ನೆಲೆ  ಈ ಕುರಿತು ಪ್ರತಿಕ್ರಿಯಿಸಿದ   ಸಿದ್ದರಾಮಯ್ಯ, ಪ್ರಕರಣವನ್ನು ಎಲ್ಲಿಗಾದ್ರು, ಯಾರಿಗಾದರೂ ವಹಿಸಲಿ ನಮಗೇನಂತೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಅದರಲ್ಲಿ ಯಡಿಯೂರಪ್ಪನವರು ಇದ್ದಾರೆ. ಅದರಲ್ಲಿ ನಮ್ಮದೇನು ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: CM Yeddyurappa – Weak- Chief Minister – Former CM Siddaramaiah- demanding- resignation