ಸಂಕಷ್ಟದಲ್ಲಿರುವ ಸ್ವಯಂ ಉದ್ಯೋಗಿಗಳಿಗೆ ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ನೆರವು ಘೋಷಣೆ

Promotion

ಬೆಂಗಳೂರು, ಮೇ 05, 2020 (www.justkannada.in): ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ವಯಂ ಉದ್ಯೋಗಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಬಾರಿಯ ಅರ್ಥಿಕ ನೆರವು ಘೋಷಿಸುವ ಸಾಧ್ಯತೆ ಇದೆ.

ಸಲೂನ್ ನಡೆಸುವವರು, ಸಣ್ಣ ಮಾರಾಟಗಾರರು, ದೋಬಿಗಳು ಸೇರಿದಂತೆ ಸ್ವಯಂ ಉದ್ಯೋಗದ ಮೇಲೆ ಅವಲಂಬಿತವಾಗಿರುವವರಿಗೆ ಒಂದು ಬಾರಿಯ ಹಣಕಾಸು ನೆರವು ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಆರ್ಥಿಕತೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ಕಾರಣ ಘೋಷಣೆ ಮಾಡುವುದು ಅನುಮಾನ. ಬೊಕ್ಕಸಕ್ಕೆ ಆದಾಯ ಬರುವುದನ್ನು ಗಮನಿಸಿ ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲಾಗುವುದು ಎಂದು ಹೇಳಲಾಗಿದೆ.