ಮೀಸಲಾತಿ ನೀಡಲು ಈಗಲೂ ಸಿಎಂ ಬದ್ಧ- ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ಖಂಡಿಸಿದ ಸಚಿವ ಸಿಸಿ ಪಾಟೀಲ್.

Promotion

ಬೆಂಗಳೂರು,ಜನವರಿ,14,2023(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕೇ ಬೇಕು ಎಂದು ಹಠ ಹಿಡಿದು ಪ್ರತಿಭಟನೆಗೆ ಕುಳಿತಿರುವ ಜಯಮೃತ್ಯುಂಜ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸಿಸಿ ಪಾಟೀಲ್, ಮೀಸಲಾತಿ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಈಗಲೂ ಬದ್ಧರಿದ್ದಾರೆ. ಆದರೆ ನಿನ್ನೆ ಸಿಎಂ ನಿವಾಸದ ಬಳಿ  ಜಯಮೃತ್ಯುಂಜ ಸ್ವಾಮೀಜಿ ಮಾಡಿದ ಪ್ರತಿಭಟನೆಯನ್ನ ಖಂಡಿಸುತ್ತೇನೆ. ಪ್ರತಿಭಟನೆಯ ವೇಳೆ ಸಿಎಂ ಪ್ರತಿಕೃತಿ ದಹನ ಮಾಡಿದನ್ನ ಖಂಡಿಸುತ್ತೇನೆ ಎಂದರು.

ನನಗೆ ಟಿಕೆಟ್ ಕೊಡಲು ಸಿಎಂ ಯಾರು..? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಳ್  ನೀಡಿದ ಹೇಳಿಕೆ ಕುರಿತು ಸಚಿವರಾದ ಸಿಸಿ ಪಾಟೀಲ್,  ನಿರಾಣಿ ಎದುರು ಸಿಎಂ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ  ಎನ್ನಲಾಗಿದೆ.

Key words: CM–reservation- Minister -CC Patil- condemned- Jayamruthyunjaya Swamiji’s -protest.