ಪಿಎಸ್ ಐ ನೇಮಕಾತಿ ಹಗರಣದ ಜವಾಬ್ದಾರಿ ಸಿಎಂ ಮತ್ತು ಗೃಹಸಚಿವರೇ ಹೊರಬೇಕು-  ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಸೆಪ್ಟಂಬರ್,23,2022(www.justkannada.in): ರಾಜ್ಯದಲ್ಲಿ ನಡೆದಿರುವ ಪಿಎಸ್ ಐ ನೇಮಕಾತಿ ಅಕ್ರಮ ಹಗರಣದ ಜವಾಬ್ದಾರಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರೇ ಹೊರಬೇಕು ಎಂದು  ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ,  ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಗುತ್ತಿಗೆದಾರರ ಸಂಘವು  ಪ್ರಧಾನಿ ಸೇರಿ ಎಲ್ಲರಿಗೂ ಪತ್ರ ಬರೆದಿದೆ. 40 ಪರ್ಸೆಂಟ್ ಕಮಿಷನ್  ಎಂದು ಪ್ರಧಾನಿ ಸೇರಿ ಎಲ್ಲರಿಗೂ ಪತ್ರ ಬರೆದಿದೆ.  ನಮಗೂ ರಾಜಕೀಯ ಪಕ್ಷಗಳಿಗೂ ಸಂಬಂಧವಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಹೇಳಿದ್ದಾರೆ ಆದರೂ ಸುಮ್ಮನೆ ಬಿಜೆಪಿಯವರು ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಂಪಣ್ಣ ಕೆಲವು ಮಿನಿಸ್ಟರ್ ಹೆಸರು ಕೂಡ  ಹೇಳಿದ್ದಾರೆ. ಸಚಿವ ಮುನಿರತ್ನ, ಸುಧಾಕರ್ ಅವರ ಹೆಸರು ಹೇಳಿದ್ದಾರೆ.  ಇವರು ಲಜ್ಜೆಗೆಟ್ಟರು ಇವರಿಗೆ ಮಾನ ಮರ್ಯಾದೆ ಇಲ್ಲ. ಸದನದಲ್ಲಿ  ಭ್ರಷ್ಟಾಚಾರ ವಿಚಾರವಾಗಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ  ಎಂದು ಕಿಡಿಕಾರಿದರು.

Key words: CM – Home Minister – responsibility – PSI – scam- Former CM -Siddaramaiah.