ಮುಸ್ಲೀಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ….

Promotion

ಬೆಂಗಳೂರು,ಜೂ,5,2019(www.justkannada.in): ಇಂದು ಮುಸ್ಲೀಂಬಾಂಧವರಿಗೆ ರಂಜಾನ್ ಹಬ್ಬದ ಸಂಭ್ರಮವಾಗಿದ್ದು, ಈ ಹಿನ್ನೆಲೆ  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದ್ದಾರೆ.

ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಉಪವಾಸ ವೃತ ಪೂರೈಸಿರುವ ಮುಸ್ಲಿಂ ಬಾಂಧವರು ಇಂದು ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಕೋರಿಕೊಂಡರು. ಬಹಳ ಅಪರೂಪವಾಗಿ ರಾಜ್ಯದೆಲ್ಲೆಡೆ ಇಂದು ಒಂದೇ ದಿನ ಈದ್-ಉಲ್ ಫಿತ್ರ್ ಅನ್ನು ಆಚರಣೆ ಮಾಡಲಾಗುತ್ತಿದೆ.

ಮುಸ್ಲೀಂಬಾಂಧವರಿಗೆ ಶುಭಾಶಯ ಕೋರಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಾಂತಿ ಸೌಹಾರ್ದತೆಯ ಪ್ರತೀಕವಾದ  ರಂಜಾನ್ ನಾಡಿನ ಜನತೆಗೆ ಸುಖ, ಸಮೃದ್ಧಿಯನ್ನು ತರಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Key words: CM HD Kumaraswamy wishes to Muslims celebrate Ramzan festival

#CMHDKumaraswamy #wishes #Muslims #Ramzanfestival