ನಿಡಗಲ್ ಗ್ರಾಮದ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು ಕೇಸ್: ಘಟನೆ ಬಗ್ಗೆ ಮಾಹಿತಿ ಪಡೆದ ಸಿಎಂ ಹೆಚ್.ಡಿ ಕುಮಾರಸ್ವಾಮಿ….

Promotion

ಬೆಂಗಳೂರು,ಮೇ,22,2019(www.justkannada.in): ತುಮಕೂರು ಜಿಲ್ಲೆ ಪಾವಗಡ ರಾಲ್ಲೂಕಿನ ನಿಡಗಲ್ ಗ್ರಾಮದ ವೀರಭದ್ರ ದೇವಸ್ಥಾನದಲ್ಲಿ ಕಲುಷಿತ ಆಹಾರ ಸೇವಸಿ ಬಾಲಕ ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾಗಿರುವ ಘಟನೆ ಬಗ್ಗೆ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ.

ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ವೀರಭದ್ರ ದೇವಸ್ಥಾನದಲ್ಲಿ ಕಲುಷಿತ ನೀರಿನಿಂದ ತಯಾರಿಸಿದರೆನ್ನಲಾದ ಆಹಾರ ಸ್ವೀಕರಿಸಿ ಬಾಲಕನ ವೀರಭದ್ರಪ್ಪ ಮೃತಪಟ್ಟು, ಹಲವರು ಅಸ್ವಸ್ಥರಾಗಿದ್ದಾರೆ. ವೀರಭದ್ರಸ್ವಾಮಿ ದೇವಾಲಯದಲ್ಲಿ ಪ್ರಸಾದ ತಯಾರಿಕೆಗೆ ಅಡುಗೆಗೆ ನೀರಿಲ್ಲದ ಕಾರಣ ಭಕ್ತರು ತೊಟ್ಟಿಯ ನೀರು ಬಳಸಿ ಅಡುಗೆ ಮಾಡಿದ್ದರು.

ಘಟನೆ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತುಮಕೂರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ  ಹೆಚ್.ಡಿ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

Key words: boy death when consumed food in the temple. CM HD Kumaraswamy, who received information about the incident

#tumakur #food #temple #cmhdkumaraswamy #information