ಸಂಪುಟ ವಿಸ್ತರಣೆ  ಟೆನ್ಷನ್ ನಡುವೆ ರಿಲ್ಯಾಕ್ಸ್ ಮೂಡ್: ಇಂದು ಸಂಜೆ ಸಾಕ್ಷ್ಯಚಿತ್ರ ವೀಕ್ಷಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ…

Promotion

ಬೆಂಗಳೂರು,ಜ,28,2020(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆ  ಟೆನ್ಷನ್ ನಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ  ಕೆಲಸಮಯ ರಿಲ್ಯಾಕ್ಸ್ ಆಗಿರಲಿದ್ದಾರೆ.  ಹೌದು, ಇಂದು ಸಂಜೆ ಒರಾಯನ್ ಮಾಲ್ ನಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ವೈಲ್ಡ್ ಕರ್ನಾಟಕ ಎಂ ಸಾಕ್ಷ್ಯ ಚಿತ್ರವನ್ನ ವೀಕ್ಷಿಸಲಿದ್ದಾರೆ.

ಇಂದು ಸಂಜೆ 5.30ಕ್ಕೆ ಒರಾಯನ್ ಮಾಲ್ ನಲ್ಲಿ ಅರಣ್ಯ ಮತ್ತು ವನ್ಯಜೀವಿ ಇಲಾಖೆ ವತಿಯಿಂದ ವೈಲ್ಡ್ ಕರ್ನಾಟಕ ಎಂ ಸಾಕ್ಷ್ಯ ಚಿತ್ರವನ್ನಪ್ರದರ್ಶಿಸಲಾಗುತ್ತಿದ್ದು ಸಾಕ್ಷ್ಯಚಿತ್ರವನ್ನ ವೀಕ್ಷಿಸಲು ಸಿಎಂ ಬಿಎಸ್ ಯಡಿಯೂರಪ್ಪ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂಗೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವ ಸಿ.ಸಿ ಪಾಟೀಲ್ ಸಾಥ್ ನೀಡಲಿದ್ದಾರೆ.

ಸದ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜಿಯಲ್ಲಿದ್ದು ಈ ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆಗೆ ಸರ್ಕಸ್ ನಡೆಸುತ್ತಿದ್ದಾರೆ.

Key words: CM BS Yeddyurappa – watch – this evening- Relax mood