ಯಾದಗಿರಿ ಜಿಲ್ಲೆಯಲ್ಲಿ ಸಿಎಂ ಯಡಿಯೂರಪ್ಪಗೆ ಧಿಕ್ಕಾರದ ಸ್ವಾಗತ, ಕಪ್ಪು ಬಾವುಟ ಪ್ರದರ್ಶನ

Promotion

ಯಾದಗಿರಿ, ಅಕ್ಟೋಬರ್, 06, 2019 (www.justkannada.in): ಪ್ರವಾಹದಿಂದಾಗಿ ತತ್ತರಿಸಿರುವ ಯಾದಗಿರಿ ಜಿಲ್ಲೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಯಾದಗಿರಿ ಭೇಟಿ ನೀಡಿದ ಬಳಿಕ ಮುಖ್ಯಮಂತ್ರಿಗಳು ತಿಂಥಣಿ, ಶೊರಾಪುರ ತಾಲೂಕಿನ ದೇವಪುರ ಗ್ರಾಮ, ಶಹಪುರ ತಾಲೂಕಿನ ಕೊಲ್ಲೂರು ಸೇತುವೆ, ಗೊಡೂರು, ಯಕ್ಷಂತಿ ಮತ್ತು ಇನ್ನಿತರೆ ಗ್ರಾಮಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ಯಕ್ಷಂತಿ ಗ್ರಾಮಕ್ಕೆ ಸಿಎಂ ಭೇಟಿ ನೀಡಿದರೂ ಊರಿನ ಗ್ರಾಮಸ್ಥರು ಯಡಿಯೂರಪ್ಪ ವಿರುದ್ಧ ಘೋಷಣಾ ವಾಕ್ಯಗಳನ್ನು ಕೂಗಿದರು. ಯಾದಗಿರಿಗೆ ಭೇಟಿ ನೀಡುತ್ತಿದ್ದಂತೆಯೇ ಯಡಿಯೂರಪ್ಪ ಅವರನ್ನು ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸ್ವಾಗತಿಸಿದರು. ಈ ವೇಳೆ ಪ್ರತಿಭಟನಾನಿರತ ಕೆಲ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದರು.