ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ..

Promotion

ಬೆಂಗಳೂರು,ನವೆಂಬರ್,17,2020(www.justkannada.in): ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಪಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. CM BS Yeddyurappa - Veerashaiva Lingayata Development Corporation-order

ರಾಜ್ಯದಲ್ಲಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿತ್ತು. ಈ ಬೆನ್ನಲ್ಲೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಡ ಹೆಚ್ಚಾಗಿತ್ತು. ನಿನ್ನೆ ಸ್ವಪಕ್ಷಿಯ ನಾಯಕರೇ ಆದ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ವಿ.ಸೋಮಣ್ಣ, ಬಿ.ಸಿ ಪಾಟೀಲ್ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಒತ್ತಡ ಹಾಕಿದ್ದರು. CM BS Yeddyurappa - Veerashaiva Lingayata Development Corporation-order

ಜತೆಗೆ ನಿನ್ನೆಯಷ್ಟೇ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದು, ಲಿಂಗಾಯತ ಅಭಿವೃದ್ಧಿ ನಿಗಮದ ಜೊತೆಗೆ, ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ಕಲ್ಪಿಸಿಕೊಂಡುವಂತೆ ಮನವಿ ಮಾಡಿದ್ದರು.

ಇದೀಗ ಒತ್ತಡಕ್ಕೆ ಮಣಿದಿರುವ ಸಿಎಂ ಬಿಎಸ್ ಯಡಿಯೂರಪ್ಪ ತಕ್ಷಣದಿಂದ ಜಾರಿಗೆ ಬರುವಂತೆ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದಾರೆ. ಆದರೆ ನಿಗಮಕ್ಕೆ ಅನುದಾನ ಮೀಸಲು ಘೋಷಣೆ ಮಾಡಿಲ್ಲ.

English summary….

CM BSY orders to set-up Veerashaiva-Lingayat Development Corporation
Bengaluru, Nov. 17, 2020 (www.justkannada.in): Following pressure by own party members including DCM Lakshman Savadi, Minister V. Somanna, B.C. Patil and others Chief Minister B.S. Yedyurappa has issued orders for establishment of the Veerashaiva-Lingayath Development Corporation.CM BS Yeddyurappa - Veerashaiva Lingayata Development Corporation-order
It can be recalled here that the State Government had proposed to set up a Maratha Development Authority in the State, two days ago. Former Home Minister M.B. Patil had written a detailed letter to CM B.S. Yedyurappa just a day ago demanding establishment of Lingayath Development Corporation and provide 16 per cent reservation for Lingayath community.
It appears CM B.S. Yedyurappa has yielded to the pressure and issued orders to establish the Lingayath Development Corporation, but has not disclosed about grants.

Key words: CM BS Yeddyurappa – Veerashaiva Lingayata Development Corporation-order