ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿಎಸ್ ಯಡಿಯೂರಪ್ಪ: ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ಸೂಚನೆ.

Promotion

ಬೆಂಗಳೂರು,ಜುಲೈ,26,2021(www.justkannada.in): ಸಿಎಂ ಸ್ಥಾನಕ್ಕೆ  ಬಿಎಸ್ ಯಡಿಯೂರಪ್ಪ  ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದು  ಈ ಮೂಲಕ ಹಲವು ದಿನಗಳಿಂದ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದ ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಬಿದ್ದಿದೆ.jk

ಸರ್ಕಾರದ 2 ವರ್ಷದ ಸಾಧನಾ ಸಮಾವೇಶದಲ್ಲಿ ರಾಜೀನಾಮೆ ನೀಡುವುದಾಗಿ ಭಾವುಕರಾಗಿಯೇ ಘೋಷಣೆ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ಅಂಗೀಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಮುಂದಿನ ಸಿಎಂ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿರುವಂತೆ ಬಿಎಸ್ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದ ನಂತರ 2019 ಜುಲೈ 26 ರಂದು ಬಿಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ENGLISH SUMMARY…

BSY resigns as CM: Governor asks him to continue as provisory
Bengaluru, July 26,2021 (www.justkannada.in): Chief Minister B.S. Yediyurappa has resigned from his post. The row over his resignation, which had become a hot discussion among the people in the State has come to an end with his resignation.
B.S. Yediyurappa had earlier informed that he would submit his resignation during the State BJP government’s two-year achievement program, with tears in his eyes. However, he visited Raj Bhavan and submitted his resignation to the governor Thawar Chand Gehlot.
The governor received his resignation and informed him to continue as provisory till his successor his announced. B.S. Yediyurappa was sworn in as the Chief Minister of Karnataka on July 26, 2019, after the end of the coalition government.
Keywords: Chief Minister B.S. Yediyurappa/ resigns/ submits resignation/ Governor/ Thawarchand Gehlot

Key words: CM BS Yeddyurappa -resigns – CM post- Governor- Thawar Chand Gehlot