ಸಿಎಂ ಬಿಎಸ್ ಯಡಿಯೂರಪ್ಪ ಅವರ ಕೋವಿಡ್ -19 ಟೆಸ್ಟ್ ವರದಿ ಬಹಿರಂಗ….

Promotion

ಬೆಂಗಳೂರು,ಜು,18,2020(www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೋವಿಡ್ ಟೆಸ್ಟ್ ವರದಿ ಬಂದಿದ್ದು ಸಿಎಂ ಬಿಎಸ್ ವೈಗೆ  ಕೋವಿಡ್-19 ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದೆ.

 ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.  ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್.ವೈ ಅವರಿಗೆ ಸೋಂಕು ಭೀತಿ ಎದುರಾಗಿತ್ತು. ಹೀಗಾಗಿ ಸಿಎಂ ಕೆಲ ದಿನಗಳ ಕಾಲ ಸೆಲ್ಫ ಹೋಂ ಕ್ವಾರಂಟೈನ್ ನಲ್ಲಿದ್ದರು. ಸೋಂಕು ಭೀತಿ ಹಿನ್ನೆಲೆಯಲ್ಲಿ ಸಿಎಂ ಕೂಡ ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದರು.cm-bs-yeddyurappa-covid-19-test-report

ಇದೀಗ ವರದಿ ಬಂದಿದ್ದು ಸಿಎಂ ಬಿಎಸ್ ಯಡಿಯೂರಪ್ಪಗೆ  ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದಾಗಿ ಸಿಎಂ ಬಿಎಸ್ ವೈ ಹಾಗೂ ಅವರ ಜೊತೆ ಸಂಪರ್ಕಕ್ಕೆ ಬಂದಿದ್ದ ಅಧಿಕಾರಿಗಳು, ನಿವಾಸದ ಸಿಬ್ಬಂದಿ, ಹಾಗೂ ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ.

Key words: CM- BS Yeddyurappa-covid-19- test -report