ಸಿಎಂ ಬಿಎಸ್ ವೈ ಬದಲಾಯಿಸಿದ್ರೆ ಕಷ್ಟ- ಶಾಮನೂರು ಶಿವಶಂಕರಪ್ಪ ಪುನರುಚ್ಛಾರ.

Promotion

ಬೆಂಗಳೂರು,ಜುಲೈ,21,2021(www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆ ಹಿನ್ನಲೆ,  ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಬದಲಾಯಿಸಿದರೇ ಕಷ್ಟ. ಒಂದು ವೇಳೆ ನಾಯಕತ್ವ ಬದಲಾಯಿಸಿದರೇ ಅವರೇ ಅನುಭವಿಸುತ್ತಾರೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಪುನರುಚ್ಛಾರ ಮಾಡಿದ್ದಾರೆ.jk

ಈ ಕುರಿತು ಮಾತನಾಡಿರುವ ಶಾಮನೂರು ಶಿವಶಂಕರಪ್ಪ, ನಮ್ಮ ಸ್ಟ್ಯಾಂಡ್ ಈಗಲೂ ಬಿಎಸ್ ವೈ ಪರ ಇದೆ.  ಬಿಎಸ್ ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು. ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಅವರನ್ನ ಬದಲಾಯಿಸಿದರೇ ಕಷ್ಟ. ಬದಲಾಯಿಸಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.

ನಾವೇನು ಇದರಿಂದ ರಾಜಕೀಯ ಲಾಭ ಮಾಡಿಕೊಳ್ಳುತ್ತಿಲ್ಲ. ಲಿಂಗಾಯಿತ  ಸಮುದಾಯ ಸೆಳೆಯಲು ಪ್ರಯತ್ನಿಸುತ್ತಿಲ್ಲ.  ವೀರಶೈವ ಸಮುದಾಯದಿಂಧ ಹೇಳುತ್ತಿದ್ದೇನೆ. ನನ್ನ ಬಳಿ ಎರಡು ಹೆಲಿಕಾಪ್ಟರ್, ಬೆಂಜ್ ಕಾರು ಇದೆ. ದೇವರು ನನಗೆ ಏನು ಕಡಿಮೆ ಮಾಡಿಲ್ಲ. ಜೀವನ ಮಾಡಲು ಇನ್ನೇನು ಬೇಕು ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

Key words: CM BS Yeddyurappa- change-Shamanoor Sivasankarappa