ಪಂಚಮಸಾಲಿಗೆ  2ಎ ಮೀಸಲಾತಿ ನೀಡಿದ್ರೆ ಸಿಎಂ ಬೊಮ್ಮಾಯಿಗೆ ಕಲ್ಲುಸಕ್ಕೆರೆಯಿಂದ ತುಲಭಾರ- ಬಸವ ಜಯಮೃತ್ಯುಂಜಯ ಸ್ವಾಮೀಜಿ.

Promotion

ಬೆಂಗಳೂರು,ಸೆಪ್ಟಂಬರ್,25,2021(www.justkannada.in): ಪಂಚಮಸಾಲಿಗೆ  2ಎ ಮೀಸಲಾತಿ ನೀಡಿದ್ರೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಲ್ಲುಸಕ್ಕೆರೆಯಲ್ಲಿ ತುಲಭಾರ ಮಾಡುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗೆ 2ಎ ಮೀಸಲಾತಿ ಬಗ್ಗೆ ಸದನದಲ್ಲಿ ಸರಿಯಾದ ಉತ್ತರ ನೀಡಿಲ್ಲ. ಮೀಸಲಾತಿ ನೀಡದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ. ಸಿಎಂ ಜತೆ ನಾನು ಮಾತನಾಡಿದ್ದೇನೆ. ವರದಿ ತರಿಸಿಕೊಂಡು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅಕ್ಟೋಬರ್ 1 ರೊಳಗೆ ಮೀಸಲಾತಿ ನೀಡಬೇಕು. ಮೀಸಲಾತಿ ನೀಡಿದರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಲ್ಲುಸಕ್ಕೆರೆಯಲ್ಲಿ ತುಲಭಾರ ಮಾಡುತ್ತೇವೆ ಎಂದು ತಿಳಿಸಿದರು.

Key words: CM Bommayi – 2A –reservation-panchamasali- Basava Jayamritunjaya Swamiji.