ಸಿಎಂ ಬೊಮ್ಮಾಯಿ ಆಧುನಿಕ ಶಕುನಿ: ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಬೇಸರ ತಂದಿದೆ- ರಣದೀಪ್ ಸಿಂಗ್ ಸುರ್ಜೇವಾಲ.

Promotion

ಬೆಂಗಳೂರು,ಮಾರ್ಚ್,27,2023(www.justkannada.in): ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ನಡೆದ ಕಲ್ಲು ತೂರಾಟಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಬಿಎಸ್ ವೈ ಮನೆ ಮೇಲೆ ಕಲ್ಲು ತೂರಿರುವುದು ಬೇಸರ ತಂದಿದೆ.  ಬಿಎಸ್ ವೈ ಈಗ ಅಧಿಕಾರದಲ್ಲಿ ಇಲ್ಲ. ಆದರೂ ದಾಳಿ ಮಾಡಿದ್ದಾರೆ. ಯಾರೋ ಬಿಜೆಪಿಯವರೇ ಕಲ್ಲು ಎಸೆಯಲು ಕಳಿಸಿರಬೇಕು ಎಂದು ಕಿಡಿಕಾರಿದರು.

ಸಿಎಂ ಬಸವರಾಜ ಬೊಮ್ಮಾಯಿ ಆಧುನಿಕ ಶಕುನಿ. ಜನರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ.  ಶೇ. 56ರಷ್ಟು ಮೀಸಲಾತಿಯನ್ನ ಹೇಗೆ ಜಾರಿಗೆ ತರುತ್ತಾರೆ. ಎಸ್.ಸಿ ಎಸ್ ಟಿ ಸಮುದಾಯದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿ ಬಂದು ಟಾ ಟಾ ಬೈಬೈ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: CM Bommai – modern- Shakuni-  Randeep Singh Surjewala.