ಇಂದು ಇಡೀ ದಿನ ಕಡತ ವಿಲೇವಾರಿ ಮಾಡಿದ ಸಿಎಂ ಬೊಮ್ಮಾಯಿ

Promotion

ಬೆಂಗಳೂರು,ನವೆಂಬರ್,6,2021(www.justkannada.in): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಜ್ಞಾತ ಸ್ಥಳದಲ್ಲಿದ್ದು ಇಂದು ಇಡೀ ದಿನ ಕಡತ ವಿಲೇವಾರಿ ಮಾಡಿದ್ದಾರೆ.

ಅಜ್ಞಾತ ಸ್ಥಳದಲ್ಲಿ ಬೊಮ್ಮಾಯಿ ಕಡತ ವಿಲೇವಾರಿ ಮಾಡಿದ್ದಾರೆ. ಕಡತ ವಿಲೇವಾರಿ ಕೆಲಸ ಮುಗಿಸಿ ಸಿಎಂ ಬೊಮ್ಮಾಯಿ ಬೆಂಗಳೂರಿನ ಆರ್.ಟಿ. ನಗರದ ನಿವಾಸಕ್ಕೆ ಆಗಮಿಸಿದ್ದಾರೆ. ಬಹಳ ದಿನಗಳಿಂದ ಕಡತ ವಿಲೇವಾರಿ ಕೆಲಸ ಬಾಕಿ ಉಳಿದಿತ್ತು. ಉಪಚುನಾವಣೆಯಿಂದಾಗಿ ಕಡತ ವಿಲೇವಾರಿ ಬಾಕಿ ಉಳಿದಿತ್ತು. ಹೀಗಾಗಿ ಇಂದು  ಇಡೀ ದಿನ ಕಡತ ವಿಲೇವಾರಿಗೆ ಮೀಸಲಿಟ್ಟಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೇರೆ ಯಾವುದೇ ಕಾರ್ಯಕ್ರಮ ನಿಗದಿ ಮಾಡಿಕೊಂಡಿರಲಿಲ್ಲ. ರೇಸ್‌ಕೋರ್ಸ್ ರಸ್ತೆಯ ಕಚೇರಿಯಲ್ಲಿ ಕಡತ ವಿಲೇವಾರಿ ಮಾಡುವ ಬಗ್ಗೆ ಈ ಮೊದಲು ಹೇಳಲಾಗಿತ್ತು. ಕಡತ ವಿಲೇವಾರಿ ಬಾಕಿ ಉಳಿದಿದ್ದ ಕಾರಣ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ತೊಡಕಾಗಿತ್ತು.

Key words:  CM Bommai- File Disposal- today.