ಸಿಎಂ ಬೊಮ್ಮಾಯಿ ಅವರು ‘ಕ್ರಿಮಿನಲ್ಸ್ ಕೇರ್‌ ಟೇಕರ್ ಮಿನಿಸ್ಟರ್’ ಆಗಿದ್ದಾರೆ- ಕಾಂಗ್ರೆಸ್ ಟೀಕೆ.

Promotion

ಬೆಂಗಳೂರು,ಜನವರಿ,2,2023(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಕ್ರಿಮಿನಲ್ಸ್ ಕೇರ್‌ ಟೇಕರ್ ಮಿನಿಸ್ಟರ್’ ಆಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟ್ ಮಾಡಿ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರ ರಕ್ಷಣೆ . ಮತ್ತೊಬ್ಬ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಪ್ರಕರಣದಲ್ಲೂ ಅಧಿಕಾರಿಗಳ ರಕ್ಷಣೆ . ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ರಕ್ಷಣೆ. ಸಿಎಂ ಬೊಮ್ಮಾಯಿ ಅವರು CCM(ಕ್ರಿಮಿನಲ್ಸ್ ಕೇರ್‌ಟೇಕರ್ ಮಿನಿಸ್ಟರ್) ಆಗಿದ್ದಾರೆ ಎಂದು ಕಿಡಿಕಾರಿದೆ.

ಹಾಗೆಯೇ ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ಮುಂದುವರೆಸದಿ ಕಾಂಗ್ರೆಸ್, ಯುವ ವಕೀಲರಿಗೆ ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು ಖರೀದಿಸಲು ಆರ್ಥಿಕ ನೆರವು ನೀಡುತ್ತೇವೆ ಎಂದಿದ್ದ ಬಿಜೆಪಿ ಈಗ ವಕೀಲರತ್ತ ತಿರುಗಿಯೂ ನೋಡ್ತಿಲ್ಲ. ವಕೀಲರು ತಮ್ಮ ಸಂರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟಿಸುವಂತಾಗಿದ್ದು ಈ ಸರ್ಕಾರದ ನಿರ್ಲಕ್ಷ್ಯತನದ ದ್ಯೋತಕ. ಸಿಎಂ ಬೊಮ್ಮಾಯಿ ಅವರೇ, ಎಲ್ಲಿ ಪುಸ್ತಕ ಖರೀದಿಯ ಹಣ? ಎಂದು ಪ್ರಶ್ನಿಸಿದೆ.

Key words: CM Bommai – Criminals -Caretaker –Minister-Congress.