ಬೊಮ್ಮಾಯಿ ಮಂಡಿಸಿದ್ದು ಬಿಸಿಲುಕುದುರೆ ಬಜೆಟ್, ಜನರ ಕಿವಿಗೆ ಹೂವು ಇಡುವ ಬಜೆಟ್- ಡಿ.ಕೆ ಶಿವಕುಮಾರ್ ಲೇವಡಿ.

Promotion

ಬೆಂಗಳೂರು,ಫೆಬ್ರವರಿ,17,2023(www.justkannada.in): ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ 2023-24ನೇ ಸಾಲಿನ ಬಜೆಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕೆ ವ್ಯಕ್ತಪಡಿಸಿದ್ದಾರೆ.

ಬಜೆಟ್ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ಇದು ಕೇವಲ ಅಶ್ವಾಸನೆಯ ಬಜೆಟ್.  ಸಿಎಂ ಬೊಮ್ಮಾಯಿ ಮಂಡಿಸಿರುವುದು ಬಿಸಿಲು ಕುದುರೆ ಬಜೆಟ್.  ರಾಜ್ಯದ ಜನರ ಕಿವಿಗೆ ಹೂವು ಇಡುವ ಬಜೆಟ್ ಆಗಿದೆ. ಬಜೆಟ್ ಜಾತ್ರೆಯ ಕನ್ನಡಕದಂತೆ.  ಈ ಬಜೆಟ್ ನಿಂದ ಉಪಯೋಗವಿಲ್ಲ. ಜಾತ್ರೆ ಕನ್ನಡದಂತೆ ಈ ಬಜೆಟ್ ನಲ್ಲಿ ಏನು ಕಾಣಲ್ಲ ಎಂದು ಲೇವಡಿ ಮಾಡಿದರು.

ಬಜೆಟ್ ಓದಲು ಸಿಎಂ ಬೊಮ್ಮಾಯಿಗೆ ಸ್ವರ ಇರಲಿಲ್ಲ. ಬೊಮ್ಮಾಯಿ ಮಂಡಿಸಿದ ಬಜೆಟ್ ಯಾರ ಕೈಗೂ ಸಿಗಲ್ಲ. ಇದು ಬಾಯ್ ಬಾಯ್ ಬಜೆಟ್ , ಶೋ ಬಜೆಟ್ ಎಂದು ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.

Key words: CM-Bommai-budget – puts- flowers -people’s- ears – D.K Shivakumar