ರಿಮೋಟ್ ಕಂಟ್ರೋಲ್‌ ಸಿಎಂ ಎಂಬ ಡಿಕೆಶಿ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು.

kannada t-shirts

ಮೈಸೂರು,ಜುಲೈ,20,2022(www.justkannada.in): ರಿಮೋಟ್ ಕಂಟ್ರೋಲ್‌ ಸಿಎಂ ಎಂದು ಟೀಕಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ  ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಧ್ಯಕ್ಷದಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅವರ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿಕೆ ಶಿವಕುಮಾರ್ ನಾನೊಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ. ಅವರ ತಟ್ಟೆಯಲ್ಲಿ ಏನಿದೆ ಅನ್ನೋದನ್ನ ಬಿಟ್ಟು ನಮ್ಮ‌ ಬಗ್ಗೆ ಮಾತನಾಡಲು ಬರ್ತಾರೆ ಎಂದು ವಾಗ್ದಾಳಿ ನಡೆಸಿದರು.

ಜಿ.ಎಸ್.ಟಿ. ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ‌ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಜಿ.ಎಸ್.ಟಿ. ಕಾ‌ನೂನು ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದೆ. ಈಗ ಕೊರೋನಾದಿಂದಾಗಿ ಎರಡು ವರ್ಷ ರಾಜ್ಯಗಳ ಅದಾಯ ಇಳಿಮುಖವಾಗಿದೆ. ಈ ಕಾರಣಕ್ಕೆ 5 ವರ್ಷದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಕೋರಿಕೊಂಡಿದ್ದವು. ಜಿ.ಎಸ್.ಟಿ ಸಂವಿಧಾನಾತ್ಮಕವಾಗಿ‌ ರೂಪಿಸಿರುವ ಕಾನೂನು. ಅದನ್ನು ತಕ್ಷಣಕ್ಕೆ ಬದಲಿಸಲಾಗದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ‌ ಉಳಿಸಿರುವ ಜಿ.ಎಸ್.ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ. ಈಗಾಗಲೇ ಸ್ವಲ್ಪ ನೀಡಿದೆ. ಬಾಕಿ ಮೊತ್ತ ಶೀಘ್ರ ಪಾವತಿಸಲಿದೆ ಎಂದು ಹೇಳಿದರು.

Key words: CM Basavaraja Bommai –remote -control –CM- DK shivakumar

website developers in mysore