ನೇಕಾರರಿಗೆ ಮತ್ತೊಂದು ಸಿಹಿಸುದ್ಧಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಳಗಾವಿ,ಡಿಸೆಂಬರ್,19,2022(www.justkannada.in):  ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಭರವಸೆ ಬೆನ್ನಲ್ಲೇ ಇದೀಗ ನೇಕಾರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಶುಭ ಸುದ್ದಿ ನೀಡಿದ್ದಾರೆ.

ಹೌದು ನೇಕಾರರಿಗೆ ತಮಿಳುನಾಡಿನ ರೀತಿ ಉಚಿತ ವಿದ್ಯುತ್ ಪೂರೈಸುತ್ತೇವೆ. ನಾಳೆಯೇ ಈ ಬಗ್ಗೆ ಆದೇಶ ಪ್ರಕಟಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ನೇಕಾರರಿಗೆ ತಮಿಳುನಾಡಿನ ರೀತಿ ಉಚಿತ ವಿದ್ಯುತ್ ಪೂರೈಸುತ್ತೇವೆ. ಅಲ್ಲಿ (ತಮಿಳುನಾಡು) ಎಷ್ಟು ಫ್ರೀ ಕೊಡುತ್ತಿದೆಯೋ ಅಷ್ಟನ್ನು ನಾವು ಇಲ್ಲಿ ಕೊಡುತ್ತೇವೆ. ಯುನಿಟ್ ಗೆ 80 ರೂ ಇದ್ದು, ಅದನ್ನ 40 ರೂ.ಗೆ ಇಳಿಸುತ್ತೇವೆ. ನಿಮ್ಮ ಪ್ರಮುಖ ಬೇಡಿಕೆಗಳಿಗೆ ನಾನು ಈಗಾಗಲೇ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಹೇಳಿದರು.

Key words: CM- Basavaraja Bommai- good news -weavers.