ನೂತನ ಸಿಎಂ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿ  ಬಿಎಸ್ ಯಡಿಯೂರಪ್ಪರನ್ನ ಹಾಡಿ ಹೊಗಳಿದ  ಪ್ರಧಾನಿ ಮೋದಿ.

Promotion

ಬೆಂಗಳೂರು,ಜುಲೈ,28,2021(www.justkannada.in):  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ  ಅಭಿನಂದನೆ ಸಲ್ಲಿಸಿದ್ದಾರೆ.jk

ಟ್ವೀಟ್  ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಬಸವರಾಜ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ನಿರೀಕ್ಷೆಗೂ ಮೀರಿ ಕೆಲಸ ಮಾಡುವ ವಿಶ್ವಾಸವಿದೆ. ಅವರು ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಬಿಎಸ್ ವೈ ಹಾಡಿ ಹೊಗಳಿದ ಪ್ರಧಾನಿ ಮೋದಿ.

ಟ್ವಿಟ್ಟರ್ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ,  ಬಿಎಸ್ ಯಡಿಯೂರಪ್ಪಗೆ ಪಕ್ಷದ ಮೇಲಿನ ಬದ್ಧತೆ ಅವರ್ಣೀಯ. ದಶಕಗಳ ಕಾಲ ರಾಜ್ಯವನ್ನು  ಸುತ್ತಾಡಿದರು.  ಜನರನ್ನ ಒಂದೆಡೆ ಸೇರಿಸಿ ಪಕ್ಷವನ್ನ ಕಟ್ಟಿದ್ದು ಅವಿಸ್ಮರಣೀಯ. ಪಕ್ಷದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರವಾದದ್ದು, ಕರ್ನಾಟಕದ ಅಭಿವೃದ್ಧಿಗೆ ಹಾಗೂ ಪಕ್ಷದ ಅಭಿವೃದ್ಧಿಗೆ ಯಡಿಯೂರಪ್ಪ ಸಲ್ಲಿಸಿರುವ ಸೇವೆಯನ್ನು ಪದಗಳಿಂದ ಹೇಳಿ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಹಾಡಿ ಹೊಗಳಿದ್ದಾರೆ.

ENGLISH SUMMARY…

PM Modi congratulates new CM Bommai, praises BSY
Bengaluru, July 28, 2021 (www.justkannada.in): Prime Minister Narendra Modi, in his tweet, has congratulated the new Chief Minister of Karnataka Basavaraj Bommai.
In his tweet, the Prime Minister has wished the new CM all the best and has mentioned that he is confident that Basavaraj Bommai will perform beyond his expectations.
He also has praised former Chief Minister B.S. Yediyurappa, stating that the latter’s commitment towards the party is immense. “Yediyurappa’s efforts in building the party from its root in Karnataka is immeasurable. His contribution to the development of the party in Karnataka is immense,” his tweet read.
Keywords: Prime Minister/ Narendra Modi/ congratulates/ New Chief Minister/ Basavaraj Bommai/ appreciates/ B.S. Yediyurappa

Key words: CM –Basavaraj bommai-wishes- PM- modi- Former cm- bs yeddyurappa.