ಈ ಬಾರಿ ಅದ್ದೂರಿ ದಸರಾ ನಡೆಸಲು ನಿರ್ಧಾರ: ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಸಿಎಂ ಬೊಮ್ಮಾಯಿ ಹೇಳಿಕೆ.

Promotion

ಮೈಸೂರು,ಜುಲೈ,20,2022(www.justkannada.in): ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಅದ್ದೂರಿ ದಸರಾ ನಡೆಸಲಾಗಲಿಲ್ಲ. ಹೀಗಾಗಿ ಈ ಬಾರಿ ಅದ್ದೂರಿ ದಸರಾ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪತ್ನಿ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮೊದಲು ಪೂಜೆ ಸಲ್ಲಿಕೆ ಮಾಡಿದರು. ನಂತರ ದೇವಸ್ಥಾನದ ಒಳಗೆ ಹೋಗಿ ತಾಯಿ ದರ್ಶನ ಪಡೆದರು. ಸಿಎಂ ಬೊಮ್ಮಾಯಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ಗೋವಿಂದ ಕಾರಜೋಳ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ ಸಾಥ್ ನೀಡಿದರು.

ಈ ಬಾರಿಯ ದಸರಾಗೆ ಹೊಸ ಆಯಾಮ ಸಿಗಲಿದೆ.ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾಗಿದ್ದು,  ಮುಂದೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿ ಆಯ್ಕೆ ಮಾಡುತ್ತೇವೆ. ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

Key words: CM-Basavaraj bommai-visit-mysore-chamundi hills

ENGLISH SUMMARY

Grand Dasara celebrations this year: CM Bommai announces after offering puja to Goddess Chamundeshwari
Mysuru, July 20, 2022 (www.justkannada.in): The Mysuru Dasara was celebrated in a simple way for the last two years because of the COVID-19 Pandemic. However, this year the State Government has decided to conduct Dasara grandly.
Chief Minister Basavaraj Bommai, along with his wife visited the Chamundi hills in Mysuru and offered puja to the Goddess Chamundeshari. He was accompanied by Mysuru District In-charge Minister S.T. Somashekar, Ministers Govinda Karajola, MLAs S.A. Ramadas, G.T. Devegowda, and others.
Speaking to the press reporters later, the Chief Minister informed that a grand Dasara will be held this year. “We conducted a meeting yesterday. Dasara celebrations were a low-key affair in the last two years due to the pandemic. This year it will be held traditionally. All the programs including the ‘Gajapayana’ will be conducted with grandeur. We are also trying to add new attractions this year. Efforts are made to give publicity at the International level and attract more visitors. We will announce the Mysuru Tourism Circuit in one week,” he informed.
He also informed that discussions are being held concerning who has to inaugurate the Dasara this year. “We will collect the opinion of all and select the suitable person. A decision regarding forming of Dasara Authority will be decided in the coming days,” he added.
Keywords: Chief Minister/ Mysuru/ Chamundi hills/ Dasara