ಮೈಸೂರು ಸಂಸದ ‘ಪ್ರತಾಪ’: ಅಂದು ಪಿಎಂ, ಇಂದು ಸಿಎಂ ಡೋಂಟ್ ಕೇರ್ !

Promotion

ಮೈಸೂರು, ಜುಲೈ 20, 2022 (www.justkannada.in): ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಪಕ್ಷದ ನಾಯಕರು ಕಡೆಗಣಿಸುತ್ತಿದ್ದಾರಾ…?! ಹೌದು. ಇಂತಹದೊಂದು ಪ್ರಶ್ನೆ ಮೂಡಲು ಕಾರಣ ನಿನ್ನೆ ಸಿಎಂ ಜತೆ ನಡೆದ ಘಟನಾವಳಿ.

ನಿನ್ನೆ ಬೆಂಗಳೂರಿನಲ್ಲಿ ಮೈಸೂರು ದಸರಾ ಹೈಪವರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿ ವೇಳೆ ನಡೆದ ಘಟನೆ ಇದಕ್ಕೆ ಪುಷ್ಟಿ ನೀಡಿದೆ. ಸುದ್ದಿಗೋಷ್ಠಿ ಬಳಿಕ ಬಸವರಾಜ ಬೊಮ್ಮಾಯಿ ಅವರ ಬಳಿಗೆ ಮನವಿ ಪತ್ರವೊಂದರ ಜತೆ ಬರುವ ಪ್ರತಾಪ್ ಸಿಂಹ ಕಡೆ ಸಿಎಂ ಗಮನ ನೀಡುವುದಿಲ್ಲ. ಜತೆಗೆ ನಂತರ ಮತ್ತೆ ಬರುವ ವೇಳೆ ಮನವಿ ಪತ್ರದ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ.

ಈ ವೇಳೆ ಸಿಎಂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ವಿಶ್ವಾಸವಿಲ್ಲದಿದ್ದರೆ ಇದನ್ನು ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಮತ್ತೆ ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬೇಕೆನ್ನುವ ಪ್ರತಾಪ್ ಸಿಂಹ ಅವರಿಗೆ ಸಿಎಂ ಟಾಂಗ್ ನೀಡುತ್ತಾರೆ. ನನ್ನ ಜತೆ ಫೋಟೋ ಬೇಡ ಎನ್ನುತ್ತಾರೆ. ಅತೀ ಬುದ್ಧಿವಂತರ ಜತೆ ಕೆಲಸ ಮಾಡುವುದು ಕಷ್ಟ ಎಂದು ರೇಗುತ್ತಾರೆ. ಈ ಘಟನೆ ಪ್ರತಾಪ್ ಸಿಂಹ ಅವರನ್ನು ಪಕ್ಷದ ನಾಯಕರು ಕಡೆಗಣಿಸುತ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಇದರ ಜತೆಗೆ ಯೋಗ ದಿನಕ್ಕೆ ಪ್ರಧಾನಿ ಮೋದಿ ಅವರು ಆಗಮಿಸಿದ್ದ ವೇಳೆಯೂ ಪ್ರತಾಪ್ ಸಿಂಹ ಅವರನ್ನು ಸಂಪೂರ್ಣ ಕಡೆಗಣಿಸಿದ್ದರು. ಸೌಜನ್ಯಕ್ಕಾದರೂ ಅವರ ಹೆಸರು ಪ್ರಸ್ತಾಪಿಸಿರಲಿಲ್ಲ. ಅಂದು ಪ್ರಧಾನಿ ಮೋದಿ ಕಡೆಗಣಿಸಿದ್ದರೆ ಇಂದು ಸಿಎಂ ಬೊಮ್ಮಾಯಿ ಅವರು ಪ್ರತಾಪ್ ಸಿಂಹ ಅವರನ್ನು ನಿರ್ಲಕ್ಷಿಸಿದ್ದಾರೆ. ಇದಕ್ಕೆ ಅವರ ಮಾತಿನ ದಾಟಿ, ಪಕ್ಷಕ್ಕೆ ಸಾಕಷ್ಟು ಮುಜುಗರ ತಂದೊಡ್ಡುತ್ತಿದೆ. ಇದರಿಂದಲೇ ಅವರನ್ನು ಸಿಎಂ, ಪಿಎಂ ಕಡೆಗಣಿಸುತ್ತಿದ್ದಾರೆ ಎನ್ನಲಾಗಿದೆ.

Key words: CM-Basavaraj bommai-MP-prathap simha- ignore