ಕೆಯುಡಬ್ಲ್ಯೂಜೆ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟನೆಗೆ ಸಿಎಂ ಬೊಮ್ಮಾಯಿಗೆ ಆಹ್ವಾನ.

ಬೆಂಗಳೂರು,ಸೆಪ್ಟಂಬರ್,15,2021(www.justkannada.in):  ಮುಂದಿನ ತಿಂಗಳು ಕಲಬುರಗಿಯಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ಉದ್ಘಾಟನೆಗೆ ನೆರವೇರಿಸಲು ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಯಿತು.

ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉಸ್ತುವಾರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಸಮ್ಮೇಳನ ಉದ್ಘಾಟನೆ ದಿನಾಂಕ ನಿಗದಿ ಜತೆಗೆ ಸಮ್ಮೇಳನ ಉದ್ಘಾಟನೆ ಆಗಮಿಸುವಂತೆ ಆಹ್ವಾನಿಸಲಾಯಿತು.

ಮನವಿ ಆಲಿಸಿದ  ಸಿಎಂ ಬಸವರಾಜ ಬೊಮ್ಮಾಯಿ, ಕಲಬುರಗಿಯಲ್ಲಿನ ಪತ್ರಕರ್ತರ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರವಿದೆ. ಇದೇ ಸೆ. 17ಕ್ಕೆ ಕಲಬುರಗಿಗೆ ಆಗಮಿಸುತ್ತಿದ್ದು ಅಲ್ಲಿ ಸಮ್ಮೇಳನ ಕುರಿತಾಗಿ ಚರ್ಚಿಸೋಣ ಎಂದು ತಿಳಿಸಿದರು. ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಖಜಾಂಚಿ ರಾಜು ದೇಶಮುಖ ಸೇರಿದಂತೆ ಮುಂತಾದವರಿದ್ದರು.

Key words: CM basavaraj Bommai- invited – inauguration – KUWJ- 36th State Journalists Conference

ENGLISH SUMMARY…

KUWJ invites CM Basavaraj Bommai to inaugurate the 36th State Journalists Conference
Bengaluru, September 15, 2021 (www.justkannada.in): The Karnataka Union of Working Journalists (KUWJ) has invited Chief Minister Basavaraj Bommai to inaugurate the 36th KUWJ Conference scheduled to be held in Kalaburagi next month.
A team of KUWJ members led by Large and Medium Scale Industries Minister Murugesh Nirani and State President Shivanand Tagadur today visited Chief Minister Basavaraj Bommai today and appealed to inaugurate the inaugural program.
The Chief Minister informed that he would extend his support to the conference and said he would discuss his participation in the conference during his visit to Kalaburagi on September 17.
KUWJ Kalaburagi District President Bhavanisingh Thakur, General secretary Devindrappa Avanti, State Committee members Hanamantaravo Byramadagi, Devindrappa Kapanoora, Treasurer Raju Deshmukh, and others were present.
Keywords: KUWJ/ Conference/ Chief Minister/ Basavaraj Bommai/ inaugural program