ಕಾಂಗ್ರೆಸ್ ಉಗ್ರರ ಪರ ಎಂದ ಸಿಎಂ ಬೊಮ್ಮಾಯಿ ಡಿ.ಕೆ ಶಿವಕುಮಾರ್ ತಿರುಗೇಟು.

Promotion

ಬೆಂಗಳೂರು,ಡಿಸೆಂಬರ್,16,2022(www.justkannada.in): ಕಾಂಗ್ರೆಸ್ ಉಗ್ರರ ಪರ ಎಂದು ಹೇಳಿಕೆ ನೀಡಿದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಸಿಎಂ ಬೊಮ್ಮಾಯಿ ಭ್ರಷ್ಟಾಚಾರ ಮುಚ್ಚಿ ಹಾಕುವ ಬಗ್ಗೆ ಮಾತನಾಡಲಿ. ಸಿಎಂ ಬೊಮ್ಮಾಯಿ ತಾವು ಸದಾ ಪ್ರಚಾರದಲ್ಲಿರಬೇಕು.  ಹೀಗಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಾರೆ.  ಸಿಎಂ ಬೊಮ್ಮಾಯಿ ಅವರು ಭ್ರಷ್ಚಾಚಾರ ವೋಟರ್ ಐಡಿ ಬಗ್ಗೆ ಮಾತನಾಡಲಿ ಎಂದು  ಸವಾಲು ಹಾಕಿದರು.

10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸಚಿವ ಮುನಿರತ್ನ ಹೇಳಿಕೆಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ತಕ್ಷಣವೇ ಸಂಪರ್ಕದಲ್ಲಿರುವ ಆ ಶಾಸಕರನ್ನ ಬಿಜೆಪಿಗೆ ಸೇರಿಸಿಕೊಳ್ಳಲಿ. ಇವರು ಅಪರೇಷನ್ ಕಮಲ ಮಾಡುವುದರಲ್ಲಿ ಎಕ್ಸ್ ಪರ್ಟ್.  ಯಾಕೆ ತಡ ಮಾಡುತ್ತಿದ್ದಾರಂತೆ ತಕ್ಷಣ ಸೇರಿಸಿಕೊಳ್ಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕುದಿಯುತ್ತಿದ್ದಾರೆ. ಬಿಎಸ್ ವೈ ಅವರನ್ನ ಲೆಕ್ಕಕ್ಕೆಇಟ್ಟುಕೊಂಡುಲ್ಲ. ಬಿಎಸ್ ವೈ ಮಾತಲ್ಲೇ ಅವರ ನೋವು ಅರ್ಥ ಆಗುತ್ತೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: CM –Basavaraj Bommai-D.K Shivakumar – Congress