ಲಾಕ್ ಡೌನ್ ತೆರವಾದ ಬಳಿಕ ಮೈಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮೈಸೂರು,ನವೆಂಬರ್,05,2020(www.justkannada.in) : ಲಾಕ್ ಡೌನ್ ತೆರವುಗೊಂಡ ನಂತರ ಹಂತ,ಹಂತವಾಗಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಏರಿಕೆಯಾಗಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಅಕ್ಟೋಬರ್ ನಲ್ಲಿ 6 ಸಾವಿರಕ್ಕೂ ಅಧಿಕ ಪ್ರಯಾಣಿಕರು ದೇಶದ ನಾನಾ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ.jk-logo-justkannada-logoಮೈಸೂರಿನಿಂದ ಭಾರಿ ಪ್ರಮಾಣದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಕೇವಲ 489 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರೆ, ಅಕ್ಟೋಬರ್ ನಲ್ಲಿ 6779ಕ್ಕೆ ಏರಿಕೆಯಾಗಿದೆ ಎಂದು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಹಂತ,ಹಂತವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ 

ಕೊರೊನಾ ಹಿನ್ನೆಲೆ ಮಾರ್ಚ್ 20ರ ನಂತರ ದೇಶದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಮೇಲೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿತ್ತು. ಮೇ ತಿಂಗಳಲ್ಲಿ ದೇಶೀಯ ವಿಮಾನ ಪ್ರಯಾಣಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿತು. ಆದರೆ, ಕೊರೊನಾ ಭೀತಿಯಲ್ಲಿ ಜನರು ವಿಮಾನ ಪ್ರಯಾಣ ಮಾಡಲಿಲ್ಲ. ಈಗ ಹಂತ,ಹಂತವಾಗಿ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗಿದೆ. ಮೇ ತಿಂಗಳಲ್ಲಿ 489 ಪ್ರಯಾಣಿಕರು ಮೈಸೂರಿನಿಂದ ಪ್ರಯಾಣಿಸಿದ್ದಾರೆ. ಜೂನ್ ನಲ್ಲಿ 3158, ಜುಲೈನಲ್ಲಿ 2795, ಆಗಸ್ಟ್ ನಲ್ಲಿ 3057, ಸೆಪ್ಟೆಂಬರ್ ನಲ್ಲಿ 6214 ಹಾಗೂ ಅಕ್ಟೋಬರ್ ನಲ್ಲಿ 6779 ಪ್ರಯಾಣಿಕರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ.Clearing-lock down-Mysore flight-station-Passenger-increase-number

key words : Clearing-lock down-Mysore flight-station-Passenger-increase-number