ಕಾರ್ಮಿಕರು, ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿ- ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಹೆಚ್.ಎ ವೆಂಕಟೇಶ್ ಮನವಿ..

Promotion

ಮೈಸೂರು,ಮೇ,13,2021(www.justkannada.in): ಕಾರ್ಮಿಕರು, ಬಡವರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಮನವಿ ಮಾಡಿದ್ದಾರೆ.jk

ರಾಜ್ಯದಲ್ಲಿ ಕೊರೋನ ಅಟ್ಟಹಾಸ ಮುಂದುವರೆದಿದೆ. ಸದ್ಯದಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ಬರುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ.ಸರ್ಕಾರ ಅಕ್ಷರಸಹ ಕೈಚೆಲ್ಲಿ ಕೂತಿದೆ.ಇಂತಹ ಸಂದರ್ಭದಲ್ಲಿ ದಿವ್ಯಮೌನತಾಳಿರುವ ಪ್ರಧಾನಿ ಮೋದಿ ಹಾಗು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಂದ ಏನನ್ನೂ ನಿರೀಕ್ಷಿಸಲು ಸಾದ್ಯವಿಲ್ಲ. ಒಂದಡೆ ಕೊರೋನದಿಂದ ವೈದ್ಯಕೀಯ ನೆರವು ಸಿಗದೆ ಮೃತಪಡುತ್ತಿರುವವರು ಹಾಗು ಅವರ ಕುಟುಂಬ ವರ್ಗವಾದರೆ, ಮತ್ತೊಂದಡೆ ರಾಜ್ಯದ ಕೂಲಿ ಕಾರ್ಮಿಕರು, ಆಟೊ,ಟ್ಯಾಕ್ಸಿ ಚಾಲಕರು ಹಾಗು ದಿನನಿತ್ಯದ ದುಡಿಮೆಯನ್ನೇ ನಂಬಿ ಬದುಕುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ರಾಜ್ಯ ಸರ್ಕಾರ ಈ ಕೂಡಲೇ  ಆರ್ಥಿಕ ಪರಿಹಾರ ಘೋಷಿಸಬೇಕು.ಇಲ್ಲದಿದ್ದಲ್ಲಿ ನಾಡಿನ ಜನರ ದನಿಯಾಗಿ ಘನವೆತ್ತ ಹೈಕೋರ್ಟ್ ಮುಖ್ಯ ನ್ಯಾಯಧೀಶರು ಈ ಬಗ್ಗೆ  ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಂಕೆಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಮನವಿ ಮಾಡಿದ್ದಾರೆ.

ಕೇಂದ್ರ ಹಾಗು ರಾಜ್ಯ ಸರಕಾರಗಳ ವೈಫಲ್ಯದಿಂದಾಗಿ ಹಸಿದವರ, ದಿನದದುಡಿಮೆಯನ್ನೇ ನಂಬಿ ಬದುಕು ವವರ ಸ್ಥಿತಿ ಗಂಬಿೀರವಾಗಿದೆ. ಅವರ ಆತ್ಮ ಸ್ಥೈರ್ಯವನ್ನು ಹೆಚ್ಚಿಸಬೇಕಾಗಿದೆ.ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗುತ್ತಿರುವವರ ಬಗ್ಗೆ ಸರ್ಕಾರದ ಗಮನವೇ ಇಲ್ಲದಂತಾಗಿದೆ.

ಈ ಹಿಂದೆ ಕೇಂದ್ರ ಸರಕಾರ ರಾಷ್ಟ್ರೀಯ ಲಾಕ್ ಡೌನ್ ಘೋಷಿಸಿದ್ದಾಗ ಬ್ಯಾಂಕ್ ಗಳ ಬಡ್ಡಿ ಮತ್ತು ಇ ಎಮ್ ಐ ವಸೂಲಿಯನ್ನು ಮುದೂಡಲಾಗಿತ್ತು. ಆದರೀಗ ರಾಜ್ಯ ಗಳು ಲಾಕ್ ಡೌನ್ ಘೋಷಿಸಿರುವುದರಿಂದ ಲಕ್ಷಾಂತರ ಮಂದಿಗೆ ಆದಾಯವಿಲ್ಲದೆ ಬ್ಯಾಂಕಗಳ ಸಾಲ ಮತ್ತು ಬಡ್ಡಿ ಮರು ಸಂದಾಯ ಈಗ ಕಷ್ಟವಾಗಿದೆ. ಆಟೋ,, ಟ್ಯಾಕ್ಸಿ, ಮದ್ಯಮ , ಕೆಳಮದ್ಯಮ ವರ್ಗದಮಂದಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು , ಬ್ಯಾಂಕ್ ಸಾಲ ಇ ಎಮ್ ಐ ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ  ಸುಪ್ರೀಂಕೊರ್ಟ್ ಕೇಂದ್ರಕ್ಕೆ ನೀಡಿದ ಆದೇಶದಂತೆ ರಾಜ್ಯದಲ್ಲೂ ಮಾನ್ಯ ಹೈಕೋರ್ಟ್ ನ್ಯಾಯಾಧೀಶರು ಈ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕಾಗಲಿ , ಕೇಂದ್ರ ಸರಕಾರಕ್ಕಾಗಲಿ ಬ್ಯಾಂಕ್ ಬಡ್ಡಿ,ಸಾಲ ಮರುಪಾವತಿಗೆ ಸಮಯಾವಕಾಶ ನೀಡುವಂತೆ ಆದೇಶಿಸಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಈ ಬಗ್ಗೆ ಚಕಾರ ವೆತ್ತದೆ ಮೌನ ವಹಿಸಿರುವ ಬಿಜೆಪಿ ಯ 25 ಸದಸ್ಯರು ಕೂಡಲೇ ಪ್ರಧಾನಿಗಳ ಮೇಲೆ ಒತ್ತಡ ತಂದು ಜನಪರವಾಗಿ ನಿಲ್ಲಬೇಕು.ರಾಜ್ಯದ ಜನತೆಗೆ ಸ್ಪಂದಿಸದೆ ,ಮೋದಿ ಅವರ ಎದುರು ಮಾತನಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಜನಪರ ಹೋರಾಟಕ್ಕಿಳಿಯಲಿ ಎಂದು  ಹೆಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.clear-direction-government-announce-economic-package-workers-ha-venkatesh

ರೈತ ಕೃಷಿ ಸಹಕಾರ ಬ್ಯಾಂಕ್ ಗಳಲ್ಲೂ ರೈತರ ಸಾಲ ವಸೂಲಿಗೆ ಒತ್ತಡ ಹೇರಲಾಗುತ್ತಿದೆ. ರೈತ ತಾನು ಬೆಳೆದ ಬೆಳೆಯನ್ನು ಮಾರಲಾಗದೆ ಕಂಗಾಲಾಗಿದ್ದಾನೆ.ಈಕೂಡಲೇ ವಸೂಲಿ ನಿಲ್ಲಬೇಕು.

ಸ್ಪಷ್ಟ ಲಾಕ್ ಡೌನ್ ನೀತಿಯೇ ಇಲ್ಲದ ಈ ಸರಕಾರದ ನೀತಿಯಿಂದಾಗಿ ಕೊರೋನದಲ್ಲಿ ನರಳಾಡುತ್ತಿರುವವರು ಒಂದೆಡೆ ಯಾದರೆ,ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿಹೋಗುತ್ತಿರುವವರು ಮತ್ತೊಂದು ಕಡೆ ಈ ನಿಟ್ಟಿನಲ್ಲಿ ಆಗುವ ಎಲ್ಲಾ ಅನಾಹುತ ಗಳಿಗೂ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಚ್ ಎ ವೆಂಕಟೇಶ್ ಎಚ್ಚರಿಸಿದರು.

Key words:  clear direction – government -announce – economic package -workers -HA Venkatesh