ನ.1ರಂದು ಮಾನಸ ಗಂಗೋತ್ರಿಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಶಿಫ್ಟ್….

ಮೈಸೂರು,ಅಕ್ಟೋಬರ್,30,2020(www.justkannada.in): ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ವನ್ನ ಮಾನಸ ಗಂಗೋತ್ರಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಭಾರತೀಯ ಭಾಷಾ ಸಂಸ್ಥಾನ ಮೈಸೂರು, ನಿರ್ದೇಶಕರಾದ  ಪ್ರೊ ಸಿ. ಜಿ ವೆಂಕಟೇಶ್ ಮೂರ್ತಿ ತಿಳಿಸಿದರು.jk-logo-justkannada-logo

ಶಾಸ್ತ್ರೀಯ ಕನ್ನಡ  ಅತ್ಯುನ್ನತ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಇಂದು ಸುದ್ಧಿಗೊಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಪ್ರೊ ಸಿ. ಜಿ ವೆಂಕಟೇಶ್ ಮೂರ್ತಿ, ಈ ಬಾರಿ ಕನ್ನಡ ರಾಜ್ಯೋತ್ಸವವನ್ನ  ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹೊಸ ಕಚೇರಿಯಲ್ಲಿ ಆಚರಿಸಲಿದೆ. ಮಾನಸ ಗಂಗೋತ್ರಿಯ ಎನ್ ಸಿಹೆಚ್ ಎಸ್ ಆವರಣಕ್ಕೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಳಾಂತರವಾಗುತ್ತಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ನೂತನ ಕಟ್ಟಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ನವೆಂಬರ್ 1ಕ್ಕೆ ಗಂಗೋತ್ರಿಯ ಎನ್. ಸಿ. ಹೆಚ್. ಎಸ್ ಆವರಣದಲ್ಲಿ ನೂತನ ಕಟ್ಟಡದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುತ್ತದೆ. ಇನ್ನು ಈ  ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಪ್ರೊ. ಚಂದ್ರಶೇಖರ್ ಕಂಬಾರ. ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ  ಪ್ರೊ. ಜಿ. ಹೇಮಂತ್ ಕುಮಾರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.classic-kannada-center-of-excellence-study-center-shift-manasa-gangotri-barathiya-basha-samstan-director

ಕಳೆದ 6ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹಲವಾರು ಗ್ರಂಥಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ನೂತನ ಪುಸ್ತಕಗಳನ್ನು ಹೊರತರಲಾಗುತ್ತಿದೆ. ಈಗಾಗಲೇ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಸ್ಥಳಾಂತರದ ಬಳಿಕ ಹಳೆಗನ್ನಡ ಬಗ್ಗೆ ಅಧ್ಯಯನ ನಡೆಸಿ ಕನ್ನಡದ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಪ್ರೊ ಸಿ. ಜಿ ವೆಂಕಟೇಶ್ ಮೂರ್ತಿ ತಿಳಿಸಿದರು.

Key words: Classic Kannada Center of Excellence Study Center  shift-Manasa Gangotri-barathiya basha samstan- Director