ಕನ್ನಡ ಕಿರುತೆರೆಗೂ ಕಾಲಿಟ್ಟ ಮೆಗಾಸ್ಟಾರ್ ‘ಡಬ್ಬಿಂಗ್ ಸೈರಾ’

Promotion

ಬೆಂಗಳೂರು, ಡಿಸೆಂಬರ್ 18, 2019 (www.justkannada.in): ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಗೂ ಡಬ್ಬಿಂಗ್ ಸಿನಿಮಾಗಳು ಕಾಲಿಡುತ್ತಿವೆ.

ಇದಕ್ಕೆ ಮೊದಲ ಸೇರ್ಪಡೆ ತೆಲುಗಿನ ಸೈರಾ. ಇದುವರೆಗೆ ಡಬ್ಬಿಂಗ್ ಸಿನಿಮಾಗಳು ಬೆಳ್ಳಿತೆರೆಯಲ್ಲಷ್ಟೇ ಬರುತ್ತಿದ್ದವು. ಇದೀಗ ಮೊದಲ ಬಾರಿಗೆ ಇದೇ ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್ ಮುಂತಾದ ಬಹುತಾರಾಗಣವಿರುವ ತೆಲುಗಿನ ಸೈರಾ ಸಿನಿಮಾ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆ ಕಂಡಿತ್ತು. ಆ ಸಿನಿಮಾದ ಕನ್ನಡ ಅವತರಣಿಕೆ ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.