ದೆಹಲಿ ರೈತರ ಹೋರಾಟದ ಹಿಂದೆ  ಚೀನಾ, ಪಾಕ್ ಕೈವಾಡ- ಕಾಂಗ್ರೆಸ್ ವಿರುದ್ಧವೂ ಶಾಸಕ ಯತ್ನಾಳ್ ಆರೋಪ..

Promotion

ವಿಜಯಪುರ,ಜನವರಿ,27,2021(www.justkannada.in):   ನಿನ್ನೆ ದೆಹಲಿಯಲ್ಲಿ ನಡೆದ ರೈತರ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ಪಾಕ್ , ಚೀನಾ ಕೈವಾಡವಿದೆ. ಪಾಕ್ ,ಚೀನಾ ಜತೆಗೆ ಕಾಂಗ್ರೆಸ್ ಇದಕ್ಕೆ ಫಂಡಿಂಗ್ ಮಾಡಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.jk

ದೆಹಲಿ ರೈತರ ಹೋರಾಟ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಮತ್ತು ಪ್ರಧಾನಿ ಮೋದಿ ಹೆಸರು ಹಾಳು ಮಾಡಲು ಸಂಚು ಮಾಡಲಾಗಿದೆ.  ದೇಶ ವಿರೋಧಿ ಶಕ್ತಿಗಳು ಒಟ್ಟಾಗಿ ಈ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕಮ್ಯುನಿಸ್ಟ್, ಆಪ್ ಸೇರಿ ಇತರರು ಬಿಜೆಪಿ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಇದರಲ್ಲಿ ಪಾಕಿಸ್ತಾನ , ಚೀನಾ ಕೈವಾಡವಿದೆ. ಫಂಡಿಂಗ್ ಮಾಡಿದ್ದಾರೆ ಎಂದು ಕಿಡಿಕಾರಿದರು.china-pak-behind-delhi-farmer-struggle-mla-basanagowda-patil-yatnal

ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇಲ್ಲ. ಎಲ್ಲವನ್ನು ಮಾರಿಕೊಂಡಿದ್ದಾರೆ. ದೆಹಲಿ ರೈತರ ಹೋರಾಟ ಸಂಬಂಧ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

Key words: China-Pak – behind- Delhi farmer-struggle-MLA-Basanagowda patil yatnal