ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು…

Promotion

ಚಿಕ್ಕಮಗಳೂರು,ಅ,8,,,2019(www.justkannada.in):  ಕೆರೆಯಲ್ಲಿ ಈಜಲು ಹೋಗಿದ್ದ  ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬಿಳೆಕಲ್ಲು ಗ್ರಾಮದ ಕಂಚಿಕಟ್ಟೆ ಕೆರೆಯಲ್ಲಿ ಈ ಘಟನೆ ನಡೆದಿದೆ.  ಮುರುಳಿ ಕಾರ್ತಿಕ್(14), ಜೀವಿತ್ (14), ಮೃತದೇಹ ಪತ್ತೆಯಾಗಿದೆ.  ಸಿರಜ್ (14) ಮೃತದೇಹಕ್ಕಾಗಿ ಅಗ್ನಿಶಾಮ ದಳ ಶೋಧ ಕಾರ್ಯ ನಡೆಸುತ್ತಿದೆ. ಮೂವರು ಸಹ ಚಿಕ್ಕಮಗಳೂರು ನಗರದ ಹೌಸಿಂಗೌ ಬೋರ್ಡ್ ನ AIT ಕಾಲೇಜಿನ ಚಾಲಕರ ಮಕ್ಕಳು ಎಂದು ಗುರುತಿಸಲಾಗಿದೆ.

ಅಯುಧ ಪೂಜೆ ಹಬ್ಬ‌ ಮೂವರು ಬಾಲಕರು ಕೆರೆಯಲ್ಲಿ ಈಜಲು ತೆರಳಿದ್ದರು. ನಿನ್ನೆಯಿಂದ ಬಾಲಕರು ನಾಪತ್ತೆಯಾದ ಹಿನ್ನಲೆ ಪೋಷಕರು ಹುಡುಗಾಟ ನಡೆಸಿದ್ದರು. ಆದರೆ ಇಂದು ಇಬ್ಬರ ಮೃತದೇಹ ಪತ್ತೆಯಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕದಳದಿಂದ ಮತ್ತೋರ್ವ ಬಾಲಕನ ಮೃತದೇಹಕ್ಕಾಗಿ  ಶೋಧಕಾರ್ಯ ನಡೆಯುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: chikkamagalore-  three boys –death- swim