ಸುಧಾಕರ್ ನಯವಂಚಕ: ನನಗೆ ಮಕ್ಮಲ್ ಟೋಪಿ ಹಾಕಿದ್ದಾನೆ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

Promotion

ಚಿಕ್ಕಬಳ್ಳಾಪುರ,ಡಿ,2,2019(www.justkannada.in):  ಡಾ.ಸುಧಾಕರ್ ನನಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಆತ ನಯವಂಚಕ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದ ಪೆರೇಸಂದ್ರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸುಧಾಕರ್ ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ಎಂಟಿಬಿ ನಾಗರಾಜ್ ನನ್ನ ಕೆಡಿಸಿದ್ದು ಅವನೇ.  ಸರ್ಕಾರ ಬೀಳಲು ಸುಧಾಕರ್ ಸಹ ಸೂತ್ರದಾರ ಎಂದು ಕಿಡಿಕಾರಿದರು.

ನೀವು ಬಿಜೆಪಿಗೆ ಹೋದ್ರೆ ಅನರ್ಹರಾಗ್ತೀರಿ ಎಂದಿದ್ದೆ. ಆದರೆ ಸುಧಾಕರ್ ನನಗೆ ಮಕ್ಮಲ್ ಟೋಪಿ ಹಾಕಿ ಹೋಗಿದ್ದಾನೆ. ನಾನು ಅವನಿಗೆ ಟಿಕಟ್ ಕೊಡಿಸದಿದ್ದರೇ ಆತ ಶಾಸಕನಾಗುತ್ತಿರಲಿಲ್ಲ. ನಾನು ತಪ್ಪು ಮಾಡಿದೆ. ಆತನನ್ನ ಸೋಲಿಸಬೇಕು ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.

ಹಾಗೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸುಧಾಕರ್ ಒಬ್ಬ ನಯವಂಚಕ. ಸುಧಾಕರ್ ಮತ್ತೆ ಶಾಸಕನಾದ್ರೆ ಪ್ರಜಾಪ್ರಭುತ್ವಕ್ಕೆ ಮೋಸ ಮಾಡಿದಂತೆ ಎಂದು ಗುಡುಗಿದರು.

Key words: chikkaballapur-former cm-siddaramaiah- outrage-against- bjp candidate-sudhakar