ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವನ ಮತ್ತೊಂದು ವಿಸ್ಮಯ..!: ಮಾರಮ್ಮ ದೇವಿ ದೇಗುಲಕ್ಕೆ ಗುಡ್ಡಪ್ಪನ ನೇಮಿಸಿ ಅಚ್ಚರಿ ಮೂಡಿಸಿದ ಬಸವ…

Promotion

ಮಂಡ್ಯ,ಡಿ,11,2019(www.justkannada.in): ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವನ ಮತ್ತೊಂದು ವಿಸ್ಮಯ ನಡೆದಿದೆ. ಲೋಕಾರ್ಪಣೆಗೊಂಡ ಮಾರಮ್ಮ ದೇವಿ ದೇಗುಲಕ್ಕೆ ಬಸವ ಗುಡ್ಡಪ್ಪನನ್ನ ನೇಮಿಸಿ ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯದ ಹೊಸಹಳ್ಳಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನಗರದ ಹಳೇ ಗುಡಿ ಇದ್ದ ಜಾಗದಲ್ಲಿ ಹೊಸ ದೇಗುಲ ನಿರ್ಮಾಣ ಮಾಡಲಾಗಿತ್ತು. ಸೋಮವಾರ, ಮಂಗಳವಾರ ದೇಗುಲ ಲೋಕಾರ್ಪಣೆ ಕಾರ್ಯಕ್ರಮವಿತ್ತು. ನಿತ್ಯ ಪೂಜೆ ಪುನಸ್ಕಾರ ಮಾಡಲು ಗುಡ್ಡಪ್ಪನನ್ನು ನೇಮಿಸಲು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸವನ್ನು ಕರೆಸಲಾಗಿತ್ತು. ಈ ವೇಳೆ ಬಸವನಿಗೆ ಪೂಜೆ ಸಲ್ಲಿಸಿ ಗುಡ್ಡಪ್ಪನ್ನು ನೇಮಿಸುವಂತೆ ಭಕ್ತರು  ಮನವಿ ಮಾಡಿದರು.

ನೂರಾರು ಜನರ ಮಧ್ಯೆ ವ್ಯಕ್ತಿಯೊಬ್ಬನ್ನು ಬಸವ ಸೂಚಿಸಿದನು. ಆತ ಬಸವನ ಕಾಲು ಹಿಡಿದು ತನ್ನಿಂದ ಈ ಕೆಲಸವಾಗುವುದಿಲ್ಲ ಎಂದಿದ್ದು ಜನರು ಎಷ್ಟೇ ಬಲವಂತ ಮಾಡಿದ್ರೂ ಆ ವ್ಯಕ್ತಿ ಗುಡ್ಡಪ್ಪನಾಗಲು ನಿರಾಕರಿಸಿದರು. ಈ ಸಮಯದಲ್ಲಿ ಮತ್ತೊಮ್ಮೆ ಪೂಜೆ ಸಲ್ಲಿಸಿ ಸಮಸ್ಯೆಗೆ ಪರಿಹರಿಸುವಂತೆ ಬಸವನಿಗೆ ಮನವಿ ಮಾಡಲಾಯಿತು.

ಕೆಲವೊತ್ತು ಸುಮ್ಮನಿದ್ದ ಬಸವ ಬಳಿಕ ಜಗದೀಶ್ ಎಂಬುವರ ಬಳಿ ತೆರಳಿತು. ಆತ ಹೆದರಿ ಅಲ್ಲಿಂದ ಹೋಗಲು ಪ್ರಯತ್ನಿಸಿದ್ರೂ ಬಿಡದ ಬಸವ ಹೆಬ್ಬಾಳ (ಮಂಡ್ಯದ ಹೊರವಲಯದಲ್ಲಿರುವ ಹಳ್ಳ)ದವರೆಗೂ ಅಟ್ಟಾಡಿಸಿಕೊಂಡು ಹೋಗಿ ನೀರಿಗೆ ತಳ್ಳಿತು. ಈ ವೇಳೆ ಜಗದೀಶ್ ಸಂಬಂಧಿ ರಾಜಕುಮಾರ್ ಎಂಬುವರು ವಿರೋಧಿಸಲು ಮುಂದಾದ್ರು. ರಾಜಕುಮಾರ್ ರನ್ನ ಅಟ್ಟಾಡಿಸಿ ಅಲ್ಲಿಂದ ಕಳುಹಿಸಿತು. ಅಂತಿಮವಾಗಿ ಜಗದೀಶ್ ಗುಡ್ಡಪ್ಪನಾಗಲು ಒಪ್ಪಿ ಬಸವನಿಗೆ ಪೂಜೆ ಸಲ್ಲಿಸಿದ್ರು ಬಳಿಕ ಬಸವ ದೇವಾಲಯಕ್ಕೆ ತೆರಳಿತು. ಇನ್ನು ಅಲ್ಲಿ ನೆರೆದಿದ್ದ  ಭಕ್ತರು ಬಸವನ ವಿಸ್ಮಯ ಕಂಡು ಅಚ್ಚರಿಗೊಂಡರು. ಬಸವ ಈ ಹಿಂದೆಯೂ ಕೆಲವು ದೇವಾಲಯಗಳಲ್ಲಿ ಪೂಜಾರಿ ನೇಮಕ ಮಾಡಿತ್ತು.

Key words: Chikarasinakere -Kalbhairaveswara – another- wonder -Guddappa – Marmamma Devi –temple