ಹೊಸ ದಾಖಲೆ ಬರೆದ ಕನ್ನಡ ಸಿನಿಮಾ: ಭಾರತದ 21 ನಗರಗಳಲ್ಲಿ ಚಾರ್ಲಿ 777 ಪ್ರೀಮಿಯರ್ ಶೋ

Promotion

ಬೆಂಗಳೂರು, ಜೂನ್ 03, 2022 (www.justkannada.in): ಚಾರ್ಲಿ 777 ಸಿನಿಮಾ  ಜೂನ್ 10ರಂದು ವರ್ಲ್ಡ್ ವೈಡ್ ರಿಲೀಸ್ ಆಗಲು ಸಿದ್ಧತೆ ನಡೆಸಿದೆ.

ವಿಶೇಷ ಎಂದರೆ ಇಂಡಿಯಾದ 21 ಸಿಟಿಗಳಲ್ಲಿ ಚಾರ್ಲಿಯ ಪೇಯ್ಡ್ ಪ್ರೀಮಿಯರ್ ಶೋ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಹೈದ್ರಾಬಾದ್, ಚೆನ್ನೈ, ದೆಹಲಿ, ಮಧುರೈ ಸೇರಿದಂತೆ ಬರೋಬ್ಬರಿ 21 ಸಿಟಿಗಳಲ್ಲಿ ಪ್ರೀಮಿಯರ್ ಆಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಚಾರ್ಲಿ 777 ಪಾತ್ರವಾಗಿದೆ.

777 ಚಾರ್ಲಿಯ ಪೇಯ್ಡ್ ಪ್ರೀಮಿಯರ್ ಹೈದ್ರಾಬಾದ್, ವಾರಾಣಾಸಿ ಯಲ್ಲಿ ಜೂನ್ 7ರಂದು ಫಿಕ್ಸ್ ಆಗಿದ್ರೆ., ದೆಹಲಿ, ಅಮೃತ ಸರ್ ನಲ್ಲಿ ಜೂನ್ 2, ಮಧುರೈ, ಪಂಜಿಮ್, ಬರೋಡಾ, ವೈಜಾಗ್ ನಲ್ಲಿ ಜೂನ್ 8ಕ್ಕೆಫಿಕ್ಸ್ ಆಗಿದ್ರೆ‌, ಕೊಯಿಮತ್ತೂರು, ಸೊಲ್ಲಾಪುರ, ತಿರುವನಂತಪುರ, ಅಹಮದ ಬಾದ್ ನಲ್ಲಿ 7ರಂದು, ಪುಣೆ, ಮುಂಬೈ, ಕೋಚಿನ್, ಲಖನೌ, ಚೆನ್ನೈ, ಜೈಪುರ, ಕೋಲ್ಕತಾದಲ್ಲಿ 6ರಂದು, ನಾಗಪುರ, ಸೂರತ್ ನಲ್ಲಿ 9ರಂದು ಪ್ರೀಮಿಯರ್ ಶೋ ನಿಗದಿಯಾಗಿದೆ.

ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಾರ್ಲಿ 777 ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ಮಿಂಚಿದ್ದು, ರಕ್ಷಿತ್ ಗೆ ಜೋಡಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ.