ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ.

Promotion

ಹುಬ್ಬಳ್ಳಿ,ಜುಲೈ,5,2022(www.justkannada.in):  ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನ ಹತ್ಯೆ ಮಾಡಿರುವ ಘಟನೆ ಇಂದು ನಡೆದಿದೆ.

ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ  ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.  ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಹೋಟೆಲ್ ನ ರಿಸೆಪ್ಷನ್ ನಲ್ಲೇ ಕಾಲಿಗೆ ಬೀಳುವ ನೆಪದಲ್ಲಿ ಚಂದ್ರಶೇಖರ್ ಗುರೂಜಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಚಾಕು ಇರಿತಕ್ಕೊಳಗಾದ ಚಂದ್ರಶೇಖರ್ ಗುರೂಜಿ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಲಾಬೂರಾಮ್ ದೌಡಾಯಿಸಿದ್ದು,  ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನ ಕಿಮ್ಸ್ ಗೆ ರವಾನೆ ಮಾಡಲಾಗಿದೆ.

ಸರಳವಾಸ್ತು, ವಾಸ್ತು ಪರಿಹಾರದ ಸಲಹೆ ಮೂಲಕ  ಚಂದ್ರಶೇಖರ್ ಗುರೂಜಿ ಖ್ಯಾತರಾಗಿದ್ದರು.

Key words: Chandrasekhar Guruji – Saralavustu- fame -killed.

ENGLISH SUMMARY..

Chandrashekar Guruji of Saral Vastu fame murdered
Hubballi, July 5, 2022 (www.justkannada.in): Chandrashekar Guruji of Saral Vastu fame was killed by miscreants who attacked him with a knife.
The incident took place in a private hotel in Hubballi today. The miscreants who came to the hotel as disciples, attacked Chandrashekar Guruji in the Hotel reception. Hubballi-Dharwad Police Commissioner Laburam rushed to the hotel as the news of the incident spread. The body of Chandrashekar Guruji has been shifted to the KIMS Hospital in Hubballi.
Keywords: Saral Vastu/ Chandrashekar Guruji/ murdered