ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಅಂದರ್.

Promotion

ಹುಬ್ಬಳ್ಳಿ,ಜುಲೈ,5,2022(www.justkannada.in):  ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ  ಚಂದ್ರ ಶೇಖರ್ ಗುರೂಜಿ ಅವರನ್ನ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನ ಕೇವಲ ನಾಲ್ಕೇ ಗಂಟೆಗಳಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಹಂತೇಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಬೆಳಗಾವಿಯ ರಾಮದುರ್ಗದ ಬಳಿ ಆರೋಪಿಗಳನ್ನ ಬಂಧಿಸಲಾಗಿದೆ.  ನಿಗೂಢ ಸ್ಥಳಗಳಲ್ಲಿ ಆರೋಪಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.  ಇಂದು ಮಧ್ಯಾಹ್ನ ಭಕ್ತರ ಸೋಗಿನಲ್ಲಿ ಬಂದಿದ್ಧ ಇಬ್ಬರು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಚಂದ್ರಶೇಖರ್ ಗುರೂಜಿ ಅವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದರು.

ಘಟನೆ ಬೆನ್ನಲ್ಲೆ ಅಲರ್ಟ್ ಆದ ಪೊಲೀಸರು ಕೊಲೆಯಾದ ನಾಲ್ಕೇ ಗಂಟೆಗಳಲ್ಲಿ ಹಂತಕರನ್ನ ಬಂಧಿಸಿದ್ದಾರೆ.

Key words: Chandrasekhar Guruji –murder- case-  Two -accused -arrest