ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ರಥೋತ್ಸವ: ರಾಜವಂಶಸ್ಥರಿಂದ ವಿಶೇಷ ಪೂಜೆ ಸಲ್ಲಿಕೆ.

Promotion

 

ಮೈಸೂರು,ಅಕ್ಟೋಬರ್,19,2021(www.justkannada.in): ಇಂದು  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನೆರವೇರಿತು.

ತಾಯಿ ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರ, ದೇವಾಲಯದ ತುಂಬೆಲ್ಲಾ ಪುಷ್ಪಾಲಂಕಾರ ಮಾಡಲಾಗಿತ್ತು.  ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕೈಂಕರ್ಯ ಪ್ರಾರಂಭವಾಗಿದ್ದು, ತಾಯಿ ಚಾಮುಂಡೇಶ್ವರಿಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ನಂತರ ತಾಯಿ ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಪ್ರತಿ ವರ್ಷವೂ ದಸರಾ ಬಳಿಕ ಬೆಟ್ಟದ ಜಾತ್ರೆ ನಡೆಯೋದು ವಾಡಿಕೆ. ಕೊರೋನಾ ಹಿನ್ನೆಲೆ ಈ ರಥೋತ್ಸವಕ್ಕೆ  ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗತ್ತು.

ಈ ರಥೋತ್ಸವದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್,  ತ್ರಿಷಿಕಾ ಕುಮಾರಿ ಒಡೆಯರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Key words:  Chamundeshwari jatra mahotsav- Chamundi Hill-Submission – special worship

ENGLISH SUMMARY…

Chamundeshwari car festival atop Chamundi hills: Royal family offers special puja
Mysuru, October 19, 2021 (www.justkannada.in): The Chamundeshwari car festival was held atop the Chamundi Hills in Mysuru today.
While the entire temple was decorated with various varieties of flowers, the deity was adorned with Simhavaahini Alankaara. Special pujas and abhishekas were performed. The members of the Mysuru royal family offered special puja to the goddess.
The scion of the royal family, Yaduveer Krishnadatta Chamaraja Wadiyar launched the car (chariot of the goddess) procession. Entry for the public was restricted.
Rajamata Pramodadevi Wadiyar, Trishika Kumari Wadiyar, MLA L. Nagendra, Mayor Sunanda Palanetra, and other dignitaries were present.
Keywords: Car festival/ Goddess Chamundeshwari/ Chamundi hill