ಚಾಮರಾಜನಗರ ಆಕ್ಸಿಜನ್ ದುರಂತ: ಮೃತರ ಕುಟುಂಬಗಳ ನೆರವಿಗೆ ಬಂದ ಸುದೀಪ್

Promotion

ಬೆಂಗಳೂರು, ಮೇ 11, 2021 (www.justkannada.in): 

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬಗಳಿಗೆ ಕಿಚ್ಚ ಸುದೀಪ್ ನೆರೆವು ನೀಡಿದ್ದಾರೆ.

24 ಕುಟುಂಬಗಳಲ್ಲಿ ತುಂಬಾನೇ ಅವಶ್ಯಕತೆ ಇರುವ 12 ಸಂಸಾರ ಸಂಪೂರ್ಣ ಜವಾಬ್ದಾರಿಯನ್ನು ಕಿಚ್ಚನ ಚಾರಿಟೇಬಲ್ ಟ್ರಸ್ಟ್ ವಹಿಸಿಕೊಂಡಿದೆ.

ಅವಶ್ಯಕ ವಸ್ತುಗಳನ್ನು ಪೂರೈಸಲು ಟ್ರಸ್ಟ್ ಮುಂದಾಗಿದೆ. ಅಲ್ಲದೆ ಈ 12 ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಟ್ರಸ್ಟ್ ಸಹಾಯ ಹಸ್ತ ಚಾಚಲಿದೆ.

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಕೊನೆಯುಸಿರೆಳೆದಿದ್ದರು. ಇದೀಗ ಆ ಕುಟುಂಬಗಳ ನೆರವಿಗೆ ಸುದೀಪ್ ಬಂದಿದ್ದಾರೆ.