ಚಾಮರಾಜನಗರ: ಎನ್ ಆರ್ ಸಿ ಹಾಗೂ ಸಿಎಎ ವಿರೋಧಿಸಿ ಮುಸ್ಲೀಂ ಸಂಘಟನೆಗಳಿಂದ ಭಾರಿ ಪ್ರತಿಭಟನಾ ಮೆರವಣಿಗೆ..

Promotion

ಚಾಮರಾಜನಗರ,ಡಿ,23,2019(www.justkannada.in): ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ಎನ್.ಆರ್.ಸಿ. ಹಾಗೂ ಸಿ. ಎ.ಎ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ  ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ಚಾಮರಾಜನಗರದಲ್ಲಿ ಶನಿವಾರ ಮಧ್ಯರಾತ್ರಿ ನಿಷೇದಾಜ್ಞೆ ತೆರವುಗೊಳಿಸುತ್ತಿದ್ದಂತೆ ಸೋಮವಾರ ಪ್ರತಿಭಟನೆ ನಡೆಸಲು ಮುಂದಾದ ಮುಸ್ಲೀಂ ಸಂಘಟನೆಗಳು ನಗರದ ಪ್ರವಾಸಿ ಮಂದಿರದಲ್ಲಿ ಸಾವಿರಾರು ಮಂದಿ ಜಮಾಯಿಸಿ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಎನ್ ಆರ್. ಸಿ ಮತ್ತು ಸಿ. ಎ. ಎ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಾರ್ಗವಾಗಿ ರಾಷ್ಟೀಯ ಹೆದ್ದಾರಿ 209 ರಲ್ಲಿರುವ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿ, ಪ್ರತಿಭಟನೆ ಆರಂಭಕ್ಕೂ ಮುನ್ನಾ ರಾಷ್ಟ್ರಗೀತೆ ಹಾಡಲಾಯಿತು. ಪ್ರತಿಭಟನಾಕಾರರು ಭಗತ್ ಸಿಂಗ್ ಜಿಂದಾಬಾಧ್, ಅಂಬೇಡ್ಕರ್ ಜಿಂದಾಬಾದ್ ಮಹತ್ಮಾಗಾಂಧಿ ಜಿಂದಾಬಾದ್ ಸೇರಿದಂತೆ ಹಲವಾರು ದೇಶ ಭಕ್ತರಿಗೆ ಜಿಂದಾಬಾದ್ ಸೂಚಿಸುವ ಬಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು.

ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಲು ಯತ್ನಿಸುತ್ತಿದೆ, ನರೇಂದ್ರ ಮೋದಿ ಸರ್ಕಾರವು ಮುಸ್ಲೀಂರ ವಿರೋಧಿತನವನ್ನು ತೋರಿಸುತ್ತಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು. ಪ್ರತಿಭಟನೆ ಹಿನ್ನೆಲೆ ಭುವನೇಶ್ವರಿ ವೃತ್ತದ ನಾಲ್ಕು ರಸ್ತೆಯ ಮಾರ್ಗಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಪ್ರತಿಭಟನೆಯ ವೇಳೆಯಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೊಲೀಸ್ ಬಂದೂಬಸ್ತ್ ಮಾಡಿದ್ದರಿಂದ ಪ್ರತಿಭಟನೆ ಶಾಂತಿಯಿಂದ ನಡೆಯಿತು. ಜಿಲ್ಲೆಯಾದ್ಯಂತ ಸುಮಾರು 8 ಸಾವಿರಕ್ಕೂ ಹೆಚ್ಚು ಮುಸ್ಲೀಂರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೌಲಿಗಳು, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Key words: Chamarajanagar-Massive -protest – Muslim organizations –against- NRC and CAA